alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗರಿಗೆ ಬಿಸಿಸಿಐನಿಂದ ಖಡಕ್ ಎಚ್ಚರಿಕೆ

ಅನಧಿಕೃತ ಟಿ-20 ಲೀಗ್ ಗಳಿಂದ ದೂರವಿರುವಂತೆ ಬಿಸಿಸಿಐ ಕ್ರಿಕೆಟಿಗರಿಗೆ ಎಚ್ಚರಿಕೆ ನೀಡಿದೆ. ಅದರಲ್ಲೂ ಇಂಡಿಯನ್ ಜೂನಿಯರ್ ಪ್ಲೇಯರ್ ಲೀಗ್, ಜೂನಿಯರ್ ಇಂಡಿಯಾ ಪ್ಲೇಯರ್ ಲೀಗ್ ಹಾಗೂ ಜೂನಿಯರ್ ಇಂಡಿಯನ್ ಲೀಗ್ ಅನ್ನು ಬಿಸಿಸಿಐ ಆಯೋಜಿಸುತ್ತಿಲ್ಲ, ಅವುಗಳಿಗೆ ಅನುಮತಿಯನ್ನೂ ನೀಡಿಲ್ಲ ಅಂತಾ ಹೇಳಿದೆ.

ಇವುಗಳ ಹೆಸರಲ್ಲಿ ಕ್ರಿಕೆಟ್ ಸರಣಿಗಳನ್ನು ಆಯೋಜಿಸುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದ್ರೆ ಇದ್ಯಾವುದನ್ನೂ ಬಿಸಿಸಿಐ ಅಥವಾ ಐಪಿಎಲ್ ಆಯೋಜನೆ ಮಾಡುತ್ತಿಲ್ಲ, ಇವು ಬಿಸಿಸಿಐ ಅನುಮತಿಸದ ಪಂದ್ಯಾವಳಿಗಳು ಅಂತಾ ಕಾರ್ಯದರ್ಶಿ ಅಮಿತಾಭ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

ಬಿಸಿಸಿಐ ಸದಸ್ಯತ್ವ ಹೊಂದಿರುವ ಕ್ರಿಕೆಟಿಗರು ಅನುಮತಿಯಿಲ್ಲದೆ ಈ ಟೂರ್ನಿಗಳಲ್ಲಿ ಆಡುವಂತಿಲ್ಲ ಅಂತಾನೂ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಲೀಗ್ ಗಳ ಪ್ರಮೋಷನ್ ನಲ್ಲಿ ಕೂಡ ಪಾಲ್ಗೊಳ್ಳುವಂತಿಲ್ಲ. ಈ ಸರಣಿಗಳನ್ನು ಬೆಂಬಲಿಸಿದ್ದ ಗೌತಮ್ ಗಂಭೀರ್, ಪರಸ್ ದೊಗ್ರಾ ಮತ್ತು ರಿಶಿ ಧವನ್ ಕೂಡ ಅದನ್ನು ಹಿಂಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...