alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಐಪಿಎಲ್ ಟೂರ್ನಿ ಆರಂಭಕ್ಕೆ ಬಿಸಿಸಿಐ ತಯಾರಿ

ಭಾರತದಲ್ಲಿ ಹೊಡಿ ಬಡಿ ಆಟವಾದ ಚುಟುಕು ಕ್ರಿಕೆಟ್, ಐಪಿಎಲ್ ಆರಂಭವಾದ ಬಳಿಕ ಭಾರೀ ಜನಪ್ರಿಯತೆಯನ್ನು ಪಡೆದಿದೆ. ದೇಶ-ವಿದೇಶದ ಕ್ರಿಕೆಟಿಗರು ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕೈ ತುಂಬಾ ಹಣ ಗಳಿಸುತ್ತಿದ್ದಾರೆ.

ಐಪಿಎಲ್ ಯಶಸ್ಸಿನಿಂದ ಉತ್ತೇಜನಗೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ, ಮುಂದಿನ ಮೂರು ವರ್ಷಗಳೊಳಗೆ ಮಹಿಳಾ ಐಪಿಎಲ್ ಟೂರ್ನಿ ಆರಂಭಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಬಿಬಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಈ ಕುರಿತ ಸುಳಿವು ನೀಡಿದ್ದಾರೆ.

ಇದಕ್ಕೆ ಪೂರ್ವಭಾವಿಯೆಂಬಂತೆ ಈ ತಿಂಗಳ ಅಂತ್ಯದಲ್ಲಿ ಐಪಿಎಲ್ ಮಾದರಿಯ ಮಹಿಳಾ ಟ್ವೆಂಟಿ 20 ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಭಾರತದ ಮಹಿಳಾ ಕ್ರಿಕೆಟಿಗರಲ್ಲದೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಅಫ್ರಿಕಾದ ಮಹಿಳಾ ಕ್ರಿಕೆಟಿಗರೂ ಪಾಲ್ಗೊಳ್ಳಲಿದ್ದಾರೆ.

ಮಹಿಳಾ ವಿಶ್ವಕಪ್ ನಲ್ಲಿ ಭಾರತದ ವನಿತೆಯರು ಫೈನಲ್ ತಲುಪಿದ ಬಳಿಕ ಭಾರತದಲ್ಲಿ ಮಹಿಳಾ ಕ್ರಿಕೆಟ್ ಕೂಡಾ ಜನಪ್ರಿಯತೆ ಪಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಮಹಿಳಾ ಐಪಿಎಲ್ ಆರಂಭಕ್ಕೆ ಬಿಸಿಸಿಐ ತಯಾರಿ ನಡೆಸಿದ್ದು, ವಿದೇಶದ ಮಹಿಳಾ ಕ್ರಿಕೆಟಿಗರೂ ಇದರಲ್ಲಿ ಭಾಗಿಯಾಗಲಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...