alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್ 19 ಆಟಗಾರರಿಗೆ ಸಿಗಲಿದೆ ‘ಕ್ಯಾಶ್’ ಆವಾರ್ಡ್…!

ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಅಂಡರ್ 19 ಐಸಿಸಿ ವಿಶ್ವ ಕಪ್ ನ ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತೀಯ ತಂಡ ಫೈನಲ್ ಪ್ರವೇಶಿಸಿದೆ.

ಭಾರತದ ತಂಡದ ಗೆಲುವಿಗೆ ಅಭಿನಂದಿಸಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕಿರಿಯರ ತಂಡ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಫೆಬ್ರವರಿ 2 ರಂದು ಆಸ್ಟ್ರೇಲಿಯಾ ವಿರುದ್ದದ ಫೈನಲ್ ನಲ್ಲಿ ಜಯ ಸಾಧಿಸಿ ವಿಶ್ವ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಅಂಡರ್ 19 ಆಟಗಾರರು.

ಈ ಮಧ್ಯೆ ಕಿರಿಯ ಆಟಗಾರರ ಸಾಧನೆಯನ್ನು ಶ್ಲಾಘಿಸಿರುವ ಬಿಸಿಸಿಐ, ಆಟಗಾರರಿಗೆ ನಗದು ಪುರಸ್ಕಾರ ನೀಡುವ ಘೋಷಣೆ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಸಿ.ಕೆ. ಖನ್ನಾ, ರಾಹುಲ್ ದ್ರಾವಿಡ್ ರ ಕೋಚಿಂಗ್ ನಲ್ಲಿ ಕಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಟಗಾರರಿಗೆ ಬಿಸಿಸಿಐ ನಗದು ಪುರಸ್ಕಾರ ನೀಡಲಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...