alex Certify
ಕನ್ನಡ ದುನಿಯಾ       Mobile App
       

Kannada Duniya

ಘೋಷಣೆಯಾಗಿಲ್ಲ ಬಿಸಿಸಿಐ ಆಡಳಿತಾಧಿಕಾರಿ ಹೆಸರು

court

ಬಿಸಿಸಿಐ ಆಡಳಿತಾಧಿಕಾರಿ ಹೆಸರನ್ನು ಸುಪ್ರೀಂ ಕೋರ್ಟ್ ಇಂದೂ ಘೋಷಣೆ ಮಾಡಿಲ್ಲ. ಸುಪ್ರೀಂ ಕೋರ್ಟ್ ರಚಿಸಿದ್ದ ಸದಸ್ಯರ ಸಮಿತಿ 9 ಮಂದಿ ಹೆಸರಿರುವ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಗೆ ಜನವರಿ 20ರಂದು ಸಲ್ಲಿಸಿತ್ತು. ಆದ್ರೆ ಪಟ್ಟಿ ಉದ್ದವಾಯ್ತೆಂಬ ಕಾರಣಕ್ಕೆ ಇನ್ನೊಂದು ಪಟ್ಟಿ ನೀಡುವಂತೆ ಕೋರ್ಟ್ ಸೂಚನೆ ನೀಡಿತ್ತು.

ಇಂದು ಬಿಸಿಸಿಐಗೆ ಹೊಸ ಆಡಳಿತಾಧಿಕಾರಿ ನೇಮಕವಾಗಬಹುದೆಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದ್ರೆ ಆಡಳಿತಾಧಿಕಾರಿ ನೇಮಕಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ. ಆಡಳಿತಾಧಿಕಾರಿ ಹೆಸರು ಸೂಚಿಸಲು ನಮಗೂ ಅವಕಾಶ ನೀಡಬೇಕೆಂದು  ಕೋರ್ಟ್ ಮುಂದೆ ಬಿಸಿಸಿಐ ಮನವಿಯಿಟ್ಟಿದೆ. ಇದನ್ನು ಪುರಸ್ಕರಿಸಿದ ಕೋರ್ಟ್ ಮುಚ್ಚಿದ ಲಕೋಟೆಯಲ್ಲಿ ಹೆಸರುಗಳನ್ನು ಕೇಳಿದೆ.

ಸದ್ಯ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪಟ್ಟ ಖಾಲಿ ಇದೆ. ಜನವರಿ 2ರಂದು ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆಯವರನ್ನು ಕೋರ್ಟ್ ವಜಾ ಮಾಡಿದೆ. ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೆ ತರದಿರುವುದೇ ಇದಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...