alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಮೇಲೆ ಯುವರಾಜ್ ತಂದೆ ಕೆಂಗಣ್ಣು

yuvraj-singh

ಬಿಸಿಸಿಐ, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಏಕದಿನ ಹಾಗೂ ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಭಾರತ ತಂಡದ ಘೋಷಣೆ ಮಾಡಿದೆ. ದೀರ್ಘ  ಸಮಯದ ನಂತ್ರ ಯುವರಾಜ್ ಸಿಂಗ್ ಟೀಂ ಇಂಡಿಯಾಕ್ಕೆ ವಾಪಸ್ ಆಗಿದ್ದಾರೆ. ಮಗ ಟೀಂ ಇಂಡಿಯಾಕ್ಕೆ ವಾಪಸ್ ಆಗಿರುವ ಬಗ್ಗೆ ಮೊದಲ ಬಾರಿ ಯುವರಾಜ್ ಸಿಂಗ್ ತಂದೆ ಯೋಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಮಗ ಟೀಂ ಇಂಡಿಯಾಗೆ ವಾಪಸ್ ಆಗಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಯೋಗರಾಜ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮಾತನಾಡಿದ್ದಾರೆ. ಧೋನಿ ಹೋಗ್ತಾ ಇದ್ದಂತೆ ಯುವರಾಜ್ ತಂಡಕ್ಕೆ ಬರ್ತಾರೆ ಎಂದು ಯೋಗರಾಜ್ ಮೂರು ವರ್ಷಗಳ ಹಿಂದೆಯೇ ಹೇಳಿದ್ದರಂತೆ.

ಯುವರಾಜ್ ಸಿಂಗ್ ಮೇಲೆ ಗುರೂಜಿಯ ಕೃಪೆ ಇದೆ. ಹಾಗಾಗಿ ಯುವರಾಜ್ ತಂಡಕ್ಕೆ ಮರಳಿದ್ದಾರೆ. ಇನ್ನು ಫಲಿತಾಂಶವೊಂದೇ ಬಾಕಿ ಇದೆ. ಉತ್ತಮ ಹೊಡೆತದ ಮೂಲಕ ಯುವರಾಜ್ ಎಲ್ಲರಿಗೂ ಉತ್ತರ ನೀಡಲಿದ್ದಾರೆಂದು ಯೋಗರಾಜ್ ಹೇಳಿದ್ದಾರೆ.

ಕೊನೆಯದಾಗಿ 2013, ಡಿಸೆಂಬರ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಯುವರಾಜ್ ಮೈದಾನಕ್ಕಿಳಿದಿದ್ದರು. ಮೊಹಾಲಿಯಲ್ಲಿ ಕಾಂಗರೂಗಳ ವಿರುದ್ದ ಕೊನೆಯ ಟಿ-20 ಆಡಲು ಅವಕಾಶ ಸಿಕ್ಕಿತ್ತು.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...