alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐ ನಿದ್ದೆಗೆಡಿಸಿದೆ ಕಾನೂನು ಆಯೋಗದ ವರದಿ

ಕಾನೂನು ಆಯೋಗ, ಕೇಂದ್ರ ಸರ್ಕಾರಕ್ಕೆ ನೀಡಿದ ವರದಿ ಬಿಸಿಸಿಐ ನಿದ್ದೆಗೆಡಿಸಿದೆ. ಭಾರತ ಕ್ರಿಕೆಟ್​ ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಅಳವಡಿಸುವಂತೆ ಕಾನೂನು ಆಯೋಗ, ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ಕೇಂದ್ರ ಇನ್ನು ತನ್ನ ನಿರ್ಧಾರವನ್ನು ಪ್ರಕಟಿಸುವುದು ಬಾಕಿ ಇದ್ದು, ಎಲ್ಲರ ಚಿತ್ತ ಕೇಂದ್ರದ ಆದೇಶದ ಕಡೆ ನೆಟ್ಟಿದೆ.

ಒಂದು ವೇಳೆ ಕೇಂದ್ರ ಈ ಶಿಫಾರಸಿಗೆ ಅನುಮೋದನೆ ನೀಡಿದ್ದೇ ಆದಲ್ಲಿ, ಬಿಸಿಸಿಐ, ಆರ್​ ಟಿ ಐ ಅಡಿ ಬರುತ್ತದೆ. ಹೀಗಾದಲ್ಲಿ ಕ್ರೀಡಾ ಪ್ರೇಮಿಗಳು ಬಿಸಿಸಿಐ ಹಣದ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಇದ್ರಿಂದ ಕ್ರೀಡೆಯಲ್ಲಿ ಪಾರದರ್ಶಕತೆ ತರುವ ಉದ್ದೇಶ ಕಾನೂನು ಆಯೋಗದ್ದಾಗಿದೆ.

2016 ರಲ್ಲಿ ಸುಪ್ರೀಂ ಕೋರ್ಟ್​​ ಬಿಸಿಸಿಐಯನ್ನು ಆರ್​​ ಟಿ ಐ ಅಡಿ ತರಲು ಸಾಧ್ಯವೇ ಎಂದು ಕಾನೂನು ಆಯೋಗಕ್ಕೆ ಪ್ರಶ್ನಿಸಿತ್ತು. ಈ ನಿಟ್ಟಿನಲ್ಲಿ ಕಾನೂನು ಆಯೋಗ, ಕೇಂದ್ರಕ್ಕೆ ವರದಿ ನೀಡಿದೆ. ಈ ವರದಿಯಲ್ಲಿ ಬಿಸಿಸಿಐ, ಆರ್​ ಟಿ ಐ ಕಾಯ್ದೆಯ ಅಡಿಯಲ್ಲಿ ಬರಲು ಸಾಧ್ಯ. ಬಿಸಿಸಿಐಯನ್ನು ಸಂವಿಧಾನದ ಪರಿಧಿಯಲ್ಲಿ ಅಳವಡಿಸಲು ಅವಕಾಶ ಇರೋದಾಗಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...