alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್: ಬಿಸಿಸಿಐ ಹೇಳಿದ್ದೀಗೆ….

ನವದೆಹಲಿ: ಕ್ರಿಕೆಟಿಗರು ಡೋಪಿಂಗ್(ಉದ್ದೀಪನ) ಟೆಸ್ಟ್ ಗೆ ಒಳಪಡಬೇಕೆಂಬ ಒತ್ತಾಯಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ವಿರೋಧ ವ್ಯಕ್ತಪಡಿಸಿದೆ.

ಭಾರತೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ)ದ ಉದ್ದೀಪನ ಮದ್ದು ಪರೀಕ್ಷೆಯ ಅಧಿಕಾರ ವ್ಯಾಪ್ತಿಗೆ ಕ್ರಿಕೆಟ್ ಆಟಗಾರರು ಒಳಪಡುವುದಿಲ್ಲ ಎಂದು ಬಿ.ಸಿ.ಸಿ.ಐ. ಹೇಳಿದೆ.

ನಾಡಾ ಮುಖ್ಯಸ್ಥ ನವೀನ್ ಅಗರ್ ವಾಲ್ ಅವರು ಕ್ರಿಕೆಟಿಗರ ಡೋಪಿಂಗ್ ಪರೀಕ್ಷೆ ಕುರಿತಾಗಿ ಬರೆದಿದ್ದ ಪತ್ರಕ್ಕೆ ಬಿ.ಸಿ.ಸಿ.ಐ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೋಹ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಕೆಟ್ ಮಂಡಳಿ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಆಗದಿರುವ ಕಾರಣ ಭಾರತೀಯ ಕ್ರಿಕೆಟ್ ಆಟಗಾರರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಬಿ.ಸಿ.ಸಿ.ಐ. ರಾಷ್ಟ್ರೀಯ ಕ್ರೀಡಾ ಒಕ್ಕೂಟವಲ್ಲ. ಬಿ.ಸಿ.ಸಿ.ಐ.ನ ಉದ್ದೀಪನ ನಿಗ್ರಹ ವ್ಯವಸ್ಥೆ ದೃಢವಾಗಿದೆ. ಬಿ.ಸಿ.ಸಿ.ಐ. ಸಂಘಟಿಸುವ ಯಾವುದೇ ದೇಶೀಯ, ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಯಾವುದೇ ವಯೋಮಿತಿಯ ಕ್ರಿಕೆಟ್ ಆಟಗಾರರು ಡೋಪಿಂಗ್ ಪರೀಕ್ಷೆಗೆ ಒಳಪಡುವುದಿಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...