alex Certify
ಕನ್ನಡ ದುನಿಯಾ       Mobile App
       

Kannada Duniya

ಶೇಕಡಾ 100 ರಷ್ಟು ಏರಿಕೆಯಾಯ್ತು ದ್ರಾವಿಡ್ ಸಂಬಳ

rahul_5nkcvij

ಭಾರತದ ಎ ಹಾಗೂ ಕಿರಿಯ ತಂಡದ ತರಬೇತಿದಾರ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ವೇತನದಲ್ಲಿ ಹೆಚ್ಚಳವಾಗಿದೆ. ಬಿಸಿಸಿಐ ರಾಹುಲ್ ದ್ರಾವಿಡ್ ಸಂಬಳವನ್ನು ಶೇಕಡಾ 100ರಷ್ಟು ಹೆಚ್ಚಿಗೆ ಮಾಡಿದೆ.

ಮೊದಲು ದ್ರಾವಿಡ್  2.5 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು. ಈಗ 5 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಾರ್ಚ್ ನಲ್ಲಿಯೇ ಅವರ ಒಪ್ಪಂದ ಮುಗಿದಿದ್ದು, ಹೊಸ ಒಪ್ಪಂದದ ವೇಳೆ ಸಂಬಳ ಹೆಚ್ಚಿಸಲಾಗಿದೆ.

ಶುಕ್ರವಾರ ಬಿಸಿಸಿಐ ದ್ರಾವಿಡ್ ಅವರನ್ನು 2019ರವರೆಗೆ ಕೋಚ್ ಆಗಿ ಮುಂದುವರೆಸುವುದಾಗಿ ಘೋಷಣೆ ಮಾಡಿತ್ತು. 2015ರಲ್ಲಿ ದ್ರಾವಿಡ್ ಮೊದಲ ಬಾರಿ ಈ ಜವಾಬ್ದಾರಿ ಹೊತ್ತಿದ್ದರು. ರಾಹುಲ್ ಮಾರ್ಗದರ್ಶನದಲ್ಲಿ ಭಾರತದ ಎ ತಂಡ ಆಸ್ಟ್ರೇಲಿಯಾ ತ್ರಿಕೋನ ಸರಣಿಯಲ್ಲಿ ಗೆಲುವು ಸಾಧಿಸಿತ್ತು. ದ್ರಾವಿಡ್ ಮಾರ್ಗದರ್ಶನದಲ್ಲಿ ಅಂಡರ್ 19 ತಂಡ ಕಳೆದ ವಿಶ್ವಕಪ್ ನಲ್ಲಿ ಫೈನಲ್ ತಲುಪಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...