alex Certify
ಕನ್ನಡ ದುನಿಯಾ       Mobile App
       

Kannada Duniya

ರವಿಶಾಸ್ತ್ರಿಗೆ 1.20 ಕೋಟಿ ರೂ. ನೀಡಿದ ಬಿಸಿಸಿಐ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಗೆ ಮೊದಲ ಸಂಬಳ ಸಿಕ್ಕಿದೆ. ಬಿಸಿಸಿಐ ರವಿಶಾಸ್ತ್ರಿಗೆ ಮೂರು ತಿಂಗಳ ಸಂಬಳವಾಗಿ 1.20 ಕೋಟಿ ರೂಪಾಯಿಯನ್ನು ನೀಡಿದೆ. ರವಿಶಾಸ್ತ್ರಿ ಜುಲೈನಿಂದ ಮುಖ್ಯ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಸಿಸಿಐ ಜಾರಿ ಮಾಡಿರುವ ಅಂಕಿಅಂಶಗಳ ಪ್ರಕಾರ, ರವಿ ಶಾಸ್ತ್ರಿಗೆ ಮೂರು ತಿಂಗಳಿಗೆ 1,20,87,187 ರೂಪಾಯಿ ನೀಡಲಾಗಿದೆ. ಬಿಸಿಸಿಐ ಜುಲೈ 18ರಿಂದ ಅಕ್ಟೋಬರ್ 18ರ ನಡುವಿನ ಸಂಬಳವಾಗಿ ಶಾಸ್ತ್ರಿಗೆ ಈ ಹಣ ನೀಡಲಾಗಿದೆ.

ಶಾಸ್ತ್ರಿ ಬಿಟ್ಟು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ 57.88 ಲಕ್ಷ ರೂಪಾಯಿ ನೀಡಲಾಗಿದೆ. ಭಾರತದಿಂದ ಹೊರಗೆ ಆಡಿದ ಅಂತರಾಷ್ಟ್ರೀಯ ಪಂದ್ಯದ ಒಟ್ಟು ಆದಾಯದಲ್ಲಿ ಒಂದು ಭಾಗವನ್ನು ನೀಡಲಾಗಿದೆ. ದೆಹಲಿಯಲ್ಲಿ ದೇಶಿ ಕ್ರಿಕೆಟ್ ಆಡುವ ಆಟಗಾರರಿಗೂ ಬಿಸಿಸಿಐ ಒಳ್ಳೆ ಸುದ್ದಿ ನೀಡಿದೆ. ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯ ಶುಲ್ಕ ರೂಪದಲ್ಲಿ 69,35,141 ರೂಪಾಯಿ ಮತ್ತು 56,79,641 ರೂಪಾಯಿಯನ್ನು ಬಿಸಿಸಿಐ ಪಾವತಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...