alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ತೆಂಡೂಲ್ಕರ್ ಗೂ ರಿಯಾಯಿತಿ ನೀಡದ ಬಿಸಿಸಿಐ

555_1492776153_749x421

ವ್ಯವಹಾರದಲ್ಲಿ ಬಿಸಿಸಿಐ ತುಂಬಾ ಕಟ್ಟುನಿಟ್ಟಾಗಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ವಿಚಾರದಲ್ಲಿಯೂ ಬಿಸಿಸಿಐ ತನ್ನ ನಿಯಮವನ್ನು ಸಡಿಲಿಸಿಲ್ಲ. ಹಾಗೆ ಸಚಿನ್ ಗೆ ಯಾವುದೇ ರಿಯಾಯಿತಿ ನೀಡಲಿಲ್ಲ.

ಸಚಿನ್ ತೆಂಡೂಲ್ಕರ್ ಸದ್ಯ ‘ಸಚಿನ್:ಬಿಲಿಯನ್ ಡ್ರೀಮ್ಸ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. 200 ನಾಟ್ ಔಟ್ ನಿರ್ಮಾಣ ಕಂಪನಿ ಬಿಸಿಸಿಐನಿಂದ ಕೆಲವೊಂದು ವಿಡಿಯೋ ಕೇಳಿತ್ತು. ಚಿತ್ರಕ್ಕೆ ಸಚಿನ್ ಆಟದ ಕೆಲ ತುಣುಕುಗಳನ್ನು ಜೋಡಿಸಲು ನಿರ್ಮಾಣ ಕಂಪನಿ ಮುಂದಾಗಿದೆ. ಈ ವಿಡಿಯೋಕ್ಕೆ ಕೆಲ ರಿಯಾಯಿತಿ ನೀಡುವಂತೆಯೂ ಕೇಳಿದೆ. ಆದ್ರೆ ವೆಚ್ಚ ಕಟ್ ಮಾಡಲು ಬಿಸಿಸಿಐ ನಿರಾಕರಿಸಿದೆ.

ಸಚಿನ್ ನಿವೃತ್ತಿ ವೇಳೆ ಮಾಡಿದ ಭಾಷಣದ 3 ನಿಮಿಷ 50 ಸೆಕೆಂಡ್ ನ ವಿಡಿಯೋವನ್ನು ಉಚಿತವಾಗಿ ನೀಡಲು ಸಿದ್ಧವಿದೆ. ಆದ್ರೆ ಉಳಿದ ಕೆಲ ವಿಡಿಯೋಗಳಿಗೆ ರಿಯಾಯಿತಿ ನೀಡಲು ಒಪ್ಪಿಲ್ಲ. ವಿಶ್ವದ ಶ್ರೇಷ್ಠ ಆಟಗಾರನ ಈ ಚಿತ್ರ ಮೇ 26ರಂದು ತೆರೆಗೆ ಬರಲಿದೆ. ಸಚಿನ್ ಮೇಲೆ ನಿರ್ಮಾಣವಾಗ್ತಿರುವ ಮೊದಲ ಚಿತ್ರ ಇದಾಗಿದೆ.

ಈ ಹಿಂದೆ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಜೀವನಚರಿತ್ರೆ ಕೂಡ ಚಿತ್ರವಾಗಿದೆ. ಈ ಚಿತ್ರದ ವೇಳೆಯೂ ಕೆಲ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಸುಮಾರು ಒಂದು ಕೋಟಿ ಖರ್ಚು ಮಾಡಿದ್ದಾರೆ ಧೋನಿ ಎನ್ನಲಾಗ್ತಾ ಇದೆ. ಪ್ರತಿಯೊಂದು ಸೆಕೆಂಡ್ ಗೆ ಬೆಲೆ ನಿರ್ಧಾರ ಮಾಡುತ್ತೆ ಬಿಸಿಸಿಐ. ಪಂದ್ಯದ ಮಹತ್ವದ ಮೇಲೂ ಬೆಲೆ ಏರುಪೇರಾಗುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...