alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐ ನೀಡುವ ಹಣದಿಂದ ಮನೆ ಖರೀದಿ ಮಾಡಲಿದ್ದಾರೆ ಈ ಆಟಗಾರ್ತಿ

nuzhat_parween_1501144128_618x347

ಭಾರತೀಯ ಮಹಿಳಾ ತಂಡದ ಆಟಗಾರ್ತಿ ನುಷತ್‌ ಪರ್ವೀನ್‌ ಬಿಸಿಸಿಐ ಉಡುಗೊರೆ ರೂಪದಲ್ಲಿ ನೀಡುವ 50 ಲಕ್ಷ ರೂಪಾಯಿಯಲ್ಲಿ ಮನೆ ಖರೀದಿ ಮಾಡಲಿದ್ದಾರೆ. ನುಷತ್‌ ಪರ್ವೀನ್‌ ಮುಂಬೈನಲ್ಲಿ ಮನೆ ಖರೀದಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಮಹಿಳಾ ವಿಶ್ವಕಪ್ ಕ್ಕೆ ಆಯ್ಕೆಯಾದ ಭಾರತೀಯ ಮಹಿಳಾ ತಂಡದ 15 ಸದಸ್ಯರಲ್ಲಿ ನುಷತ್‌ ಪರ್ವೀನ್‌ ಒಬ್ಬರು. ಆದ್ರೆ ನುಷತ್‌ ಪರ್ವೀನ್‌ ಗೆ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಅವಕಾಶ ಸಿಗಲಿಲ್ಲ. ಮಧ್ಯಪ್ರದೇಶ ಸಿಂಗ್ರೌಲಿ ಆಟಗಾರ್ತಿಯನ್ನು ಸ್ಟ್ಯಾಂಡ್ ಬೈಯ್  ವಿಕೇಟ್ ಕೀಪರ್ ರೂಪದಲ್ಲಿ ಆಯ್ಕೆ ಮಾಡಲಾಗಿತ್ತು. ವಿಶ್ವಕಪ್ ಎಲ್ಲ ಪಂದ್ಯದಲ್ಲಿ ಸುಷ್ಮಾ ವರ್ಮಾ ವಿಕೆಟ್ ಕೀಪರ್ ಆಗಿ ಮೈದಾನಕ್ಕಿಳಿದಿದ್ದರಿಂದ ನುರ್ಷತ್ ಗೆ ಅವಕಾಶ ಸಿಗಲಿಲ್ಲ.

21 ವರ್ಷದ ನುರ್ಷತ್ ಮಧ್ಯಮ ವರ್ಗದಿಂದ ಬಂದವರು. ನುರ್ಷತ್ ತಂದೆ, ಮಗಳು ಮನೆ ಖರೀದಿ ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಸದ್ಯ ರೈಲ್ವೆಯಲ್ಲಿ ನುರ್ಷಿತ್ ಕೆಲಸ ಮಾಡ್ತಿದ್ದು, ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಿಸಿಸಿಐ ನೀಡುವ ಹಣದಿಂದ ಮುಂಬೈನಲ್ಲಿ ಒಂದು ಮನೆ ಖರೀದಿ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಮಗಳಿಗೆ ನಾನು ನೆರವಾಗುತ್ತೇನೆಂದು ನುರ್ಷಿತ್ ತಂದೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...