alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೀಯಾಗಿ ಈ ಕೆಲಸ ಮಾಡಿದ್ದಾರೆ ಸಚಿನ್, ಸೌರವ್, ಲಕ್ಷ್ಮಣ್

sourav-ganguly-vvs-laxman

ಟೀಂ ಇಂಡಿಯಾಕ್ಕೆ ತರಬೇತುದಾರರನ್ನು ಆಯ್ಕೆ ಮಾಡಿರುವ ಕ್ರಿಕೆಟ್ ಸಲಹಾ ಸಮಿತಿಗೆ ಬಿಸಿಸಿಐ ಧನ್ಯವಾದ ಹೇಳಿದೆ. ಪಾರದರ್ಶಕತೆ ಮತ್ತು ಅತ್ಯಂತ ಬುದ್ಧಿವಂತಿಕೆಯಿಂದ ಸಲಹಾ ಸಮತಿ ಕೋಚ್ ಆಯ್ಕೆ ಮಾಡಿದೆ ಅನ್ನೋದು ಬಿಸಿಸಿಐ ಅಭಿಪ್ರಾಯ.

ಇನ್ನೂ ಒಂದು ವಿಶೇಷ ಅಂದ್ರೆ ಕೋಚ್ ಆಯ್ಕೆ ಪ್ರಕ್ರಿಯೆಗಾಗಿ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಯಾವುದೇ ಶುಲ್ಕ ಪಡೆದಿಲ್ವಂತೆ. ಫೀಸ್ ಇಲ್ಲದೇ ಕೆಲಸ ಆಗಿದ್ದನ್ನು ನೋಡಿ ಬಿಸಿಸಿಐ ಫುಲ್ ಖುಷ್ ಆಗಿದೆ.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಲಹಾ ಸಮಿತಿ ಸದಸ್ಯರು ಕರ್ತವ್ಯ ನಿಭಾಯಿಸಿದ್ದಾರೆ ಅಂತಾ ಹೊಗಳಿದೆ. ಎರಡು ದಿನಗಳ ಹಿಂದಷ್ಟೆ ರವಿ ಶಾಸ್ತ್ರಿ ಅವರನನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು.

ರವಿಶಾಸ್ತ್ರಿ ನೀಡಿದ್ದ ಅದ್ಭುತ ಪ್ರೆಸೆಂಟೇಶನ್ ಮತ್ತು ಟೀಂ ಇಂಡಿಯಾವನ್ನು ಯಶಸ್ಸಿನತ್ತ ಕೊಂಡೊಯ್ಯುವ ಬಗ್ಗೆ ಅವರು ಹಾಕಿಕೊಂಡಿರುವ ಯೋಜನೆಗಳ ವಿವರವನ್ನೆಲ್ಲ ಗಮನಿಸಿ ಆಯ್ಕೆ ಮಾಡಲಾಗಿದೆ ಅಂತಾ ಬಿಸಿಸಿಐ ಸಮರ್ಥಿಸಿಕೊಂಡಿದೆ.

ಅಷ್ಟೇ ಅಲ್ಲ ಜಹೀರ್ ಖಾನ್ ಅವರನ್ನು ಬೌಲಿಂಗ್ ಸಲಹೆಗಾರರಾಗಿ ಆಯ್ಕೆ ಮಾಡಿರುವ ಬಗ್ಗೆ ರವಿಶಾಸ್ತ್ರಿ ಅಸಮಾಧಾನಗೊಂಡಿದ್ದಾರೆ ಅನ್ನೋ ಆರೋಪವಿತ್ತು. ಇದಕ್ಕೂ ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ. ರವಿಶಾಸ್ತ್ರಿ ಅವರ ಸಲಹೆ ಮೇರೆಗೆ ದ್ರಾವಿಡ್ ಮತ್ತು ಜಹೀರ್ ಖಾನ್ ರನ್ನು ಆಯ್ಕೆ ಮಾಡಲಾಗಿದೆ ಅಂತಾ ತಿಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...