alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಮ್ ಇಂಡಿಯಾ ಕೋಚ್ ಆಗಲಿದ್ದರಾ ರಾಹುಲ್ ದ್ರಾವಿಡ್..?

ರಾಹುಲ್ ದ್ರಾವಿಡ್ಟೀಮ್ ಇಂಡಿಯಾದ ಹಾಲಿ ಕೋಚ್ ರವಿಶಾಸ್ತ್ರಿಯವರ ಅವಧಿ ಅಂತ್ಯಗೊಳ್ಳಲಿದ್ದು, ಈ ಸ್ಥಾನಕ್ಕೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತ್ತು. ಆದರೆ ಮೂಲಗಳ ಪ್ರಕಾರ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಉತ್ಸುಕವಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.

ರಾಹುಲ್ ದ್ರಾವಿಡ್ ಈಗಾಗಲೇ ಇಂಡಿಯಾ ಎ ಹಾಗೂ ಅಂಡರ್ 19 ತಂಡಗಳ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಇವರ ಗರಡಿಯಲ್ಲಿ ಪಳಗಿದ್ದ ಅಂಡರ್ 19 ತಂಡ, ವಿಶ್ವಕಪ್ ನಲ್ಲಿ ಫೈನಲ್ ಹಂತದವರೆಗೂ ಪ್ರವೇಶಿಸಿದ್ದು, ಹೀಗಾಗಿ ಟೀಮ್ ಇಂಡಿಯಾ ಕೋಚ್ ಆಗಲು ರಾಹುಲ್ ದ್ರಾವಿಡ್ ಸೂಕ್ತ ವ್ಯಕ್ತಿ ಎನ್ನಲಾಗುತ್ತಿದೆ.

ಟೀಮ್ ಇಂಡಿಯಾಕ್ಕೆ ವಿದೇಶಿ ಕೋಚ್ ಬದಲು ಭಾರತೀಯರನ್ನೇ ನೇಮಕ ಮಾಡುವ ಕುರಿತು ಬಿಸಿಸಿಐ ಒಲವು ವ್ಯಕ್ತಪಡಿಸಿದ್ದು, 164 ಟೆಸ್ಟ್ ಮ್ಯಾಚ್ ಹಾಗೂ 344 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿರುವ ರಾಹುಲ್ ದ್ರಾವಿಡ್ ಅವರು ಕೋಚ್ ಆಗಲು ಅರ್ಹರು ಎಂಬ ಅಭಿಪ್ರಾಯ ಬಿಸಿಸಿಯ ಕಾರ್ಯಕಾರಿ ಸಮಿತಿಯಲ್ಲಿದೆ. ಕೋಚ್ ನೇಮಕ ಕುರಿತಂತೆ ಮಾರ್ಚ್ 5 ರಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...