alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ವಿವಾದಾತ್ಮಕ ಹೇಳಿಕೆಗೆ ಬಿಸಿಸಿಐ ಅಸಮಾಧಾನ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿವಾದಾತ್ಮಕ ಹೇಳಿಕೆ ಎಲ್ಲೆಡೆ ಚರ್ಚೆಯ ವಿಷ್ಯವಾಗಿದೆ. ಕೊಹ್ಲಿ ಮಹಾನ್ ಆಟಗಾರ ಹೌದು. ಅದ್ರ ಜೊತೆ ಎದುರಾಳಿಗಳಿಗೆ ನೇರವಾಗಿ ಉತ್ತರ ನೀಡುತ್ತಾರೆ. ಮೈದಾನದಲ್ಲಿರಲಿ ಇಲ್ಲ ಹೊರಗಿರಲಿ ಕೊಹ್ಲಿ ನೇರ ನಡೆ ಕೆಲವೊಮ್ಮೆ ವಿವಾದ ಸೃಷ್ಟಿಸುತ್ತದೆ. ಈಗ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.

ಕೊಹ್ಲಿ ಅಭಿಮಾನಿಗೆ ದೇಶ ಬಿಡುವಂತೆ ಸಲಹೆ ನೀಡಿರುವ ವಿಡಿಯೋ ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದೆ. ಬಿಸಿಸಿಐ ಅಧಿಕಾರಿಗಳು ಕೊಹ್ಲಿ ಹೇಳಿಕೆ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಜೀವಂತವಾಗಿರಲು ಅಭಿಮಾನಿಗಳು ಕಾರಣ. ಅವ್ರು ಕ್ರಿಕೆಟ್ ನೋಡುತ್ತಿರುವ ಕಾರಣ ಕಂಪನಿಗಳು ಜಾಹೀರಾತು ನೀಡ್ತಿವೆ. ಇದ್ರಿಂದಲೇ ಬಿಸಿಸಿಐ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊಹ್ಲಿ ಉತ್ತಮ ಆಟಗಾರ ನಿಜ. ಮಹಾನ್ ವ್ಯಕ್ತಿಯಾಗಲು ಪ್ರಯತ್ನಿಸಬೇಕೆಂದು ಅವ್ರು ಸಲಹೆ ನೀಡಿದ್ದಾರೆ.

ಬಿಸಿಸಿಐ ಒಂದೇ ಅಲ್ಲ ಸಿಒಎ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ವೈರಲ್ ವಿಡಿಯೋವನ್ನು ಇನ್ನೊಮ್ಮೆ ಪರಿಶೀಲನೆ ನಡೆಸಲು ನಿರ್ಧರಿಸಿದೆ. ಕೊಹ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ದೇಶ ಬಿಡುವಂತೆ ಅಭಿಮಾನಿಗೆ ಸಲಹೆ ನೀಡಿರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...