alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಚ್ ಹುದ್ದೆಯಿಂದ ಕುಂಬ್ಳೆಯನ್ನು ಕೈಬಿಡಲು ಬಿಸಿಸಿಐ ಸಿದ್ಧತೆ

anil-kumble-large

ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಹುದ್ದೆಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾ ಮಾಜಿ ಆಟಗಾರರಿಗೆ ಈ ಪ್ರಕ್ರಿಯೆಯಲ್ಲಿ ನೇರ ಪ್ರವೇಶವಿದೆ ಅಂತಾ ಬಿಸಿಸಿಐ ಹೇಳಿದೆ. ಸದ್ಯ ಅನಿಲ್ ಕುಂಬ್ಳೆ ಟೀಂ ಇಂಡಿಯಾದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೆಡ್ ಕೋಚ್ ಆಯ್ಕೆ ಪ್ರಕ್ರಿಯೆಯ ಹೊಣೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕಮಿಟಿ ಆಫ್ ಡೈರೆಕ್ಟರ್ಸ್ ಗೆ ಸೇರಿದ್ದು. ಸಲಹಾ ಸಮಿತಿಯಲ್ಲಿದ್ದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಈ ಕಮಿಟಿ ಸೇರುವ ಸಾಧ್ಯತೆ ಇದೆ.

ಸಂದರ್ಶನ ಹಾಗೂ ಪ್ರೆಸೆಂಟೇಶನ್ ಪರಿಗಣಿಸಿ ಉತ್ತಮ ತರಬೇತುದಾರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಅಂತಾ ಬಿಸಿಸಿಐ ಹೇಳಿಕೊಂಡಿದೆ. ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಬಳಿಕ ಬಿಸಿಸಿಐ ಜೊತೆಗಿನ ಅನಿಲ್ ಕುಂಬ್ಳೆ ಒಪ್ಪಂದ ಅಂತ್ಯವಾಗಲಿದೆ.

ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಆಸ್ಟ್ರೇಲಿಯಾ ಹೀಗೆ ಕುಂಬ್ಳೆ ನೇತೃತ್ವದಲ್ಲಿ ಟೀಂ ಇಂಡಿಯಾ ಸಾಲು ಸಾಲು ಸರಣಿಗಳನ್ನು ಗೆದ್ದುಕೊಂಡಿದೆ. ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂಬರ್ ವನ್ ಸ್ಥಾನ ಉಳಿಸಿಕೊಂಡಿದೆ. ಟಿ-20 ಮತ್ತು ಏಕದಿನ ಪಂದ್ಯಗಳಲ್ಲೂ ಭಾರತ ಉತ್ತಮ ಪ್ರದರ್ಶನ ತೋರಿದೆ.

ಆದ್ರೂ ಬಿಸಿಸಿಐ ಕುಂಬ್ಳೆ ಅವರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸಲು ಇಚ್ಛಿಸುತ್ತಿಲ್ಲ. ಆಟಗಾರರು ಮತ್ತು ತರಬೇತುದಾರರಿಗೆ ಶುಲ್ಕ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಕುಂಬ್ಳೆ ಧ್ವನಿ ಎತ್ತಿದ್ದೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ಕುಂಬ್ಳೆಗೆ ಬಿಸಿಸಿಐ ಉನ್ನತ ಹುದ್ದೆ ನೀಡಲಿದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...