alex Certify
ಕನ್ನಡ ದುನಿಯಾ       Mobile App
       

Kannada Duniya

IPL ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಿದ ಐಸಿಸಿಗೆ ಬಿಸಿಸಿಐ ಹೇಳಿದ್ದೇನು…?

ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಜನಪ್ರಿಯ ಕ್ರಿಕೆಟ್ ಸರಣಿ. 10 ವರ್ಷಗಳಿಂದ ಐಪಿಲ್, ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವನ್ನೇ ಮೂಡಿಸ್ತಿದೆ. ಆದ್ರೆ ಈ ಬಾರಿ ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ ಪಂದ್ಯಗಳ ದಿನಾಂಕ ಬದಲಾಯಿಸುವಂತೆ ಐಸಿಸಿ ಮನವಿ ಮಾಡಿತ್ತು.

ಯಾಕಂದ್ರೆ ಕೋಲ್ಕತ್ತಾದಲ್ಲಿ ಏಪ್ರಿಲ್ 22-26 ರ ವರೆಗೆ ಐಸಿಸಿ ಸಭೆ ಕೂಡ ನಡೆಯಲಿದೆ. ಈ ಸಂದರ್ಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯವೇನಾದ್ರೂ ಇದ್ರೆ ಸಭೆಗೆ ಅಡ್ಡಿಯಾಗಬಹುದು ಅನ್ನೋದು ಐಸಿಸಿ ಆತಂಕವಾಗಿತ್ತು. ಆದ್ರೆ ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸಲು ಬಿಸಿಸಿಐ ನಿರಾಕರಿಸಿದೆ.

ಏಪ್ರಿಲ್ 22-26 ರವರೆಗೆ ಕೆಕೆಆರ್ ತಂಡಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಯಾವುದೇ ಪಂದ್ಯಗಳಿಲ್ಲ. ಏಪ್ರಿಲ್ 16ರಂದು ಪಂದ್ಯವಿದ್ದು, ನಂತರ ಮೇ 3ಕ್ಕೆ ಮತ್ತೊಂದು ಮ್ಯಾಚ್ ನಡೆಯಲಿದೆ. ಏಪ್ರಿಲ್ 22-26ರವರೆಗೆ ಹೈದ್ರಾಬಾದ್, ಮುಂಬೈ, ಇಂದೋರ್, ಬೆಂಗಳೂರು ಮತ್ತು ಜೈಪುರದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಹಾಗಾಗಿ ಯಾವುದೇ ಐಪಿಎಲ್ ಪಂದ್ಯದ ವೇಳಾಪಟ್ಟಿಯನ್ನೂ ಬದಲಾಯಿಸಲು ಸಾಧ್ಯವಿಲ್ಲ ಅಂತಾ ಬಿಸಿಸಿಐ ಈಗಾಗ್ಲೇ ಐಸಿಸಿಗೆ ಸ್ಪಷ್ಟಪಡಿಸಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...