alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಆಸೀಸ್ ವಿರುದ್ಧ ಏಕದಿನ ಪಂದ್ಯ

chinna

ಕೋಲ್ಕೊತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಕ್ರಿಕೆಟ್ ವೇಳಾಪಟ್ಟಿ ಸಮಿತಿ ಸಭೆ ಕೋಲ್ಕೊತಾದಲ್ಲಿ ನಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಆತಿಥ್ಯ ವಹಿಸುವ ಕ್ರೀಡಾಂಗಣಗಳನ್ನು ಪ್ರಕಟಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಪಂದ್ಯಗಳು ನಡೆಯಲಿವೆ. ಚೆನ್ನೈ, ಬೆಂಗಳೂರು, ನಾಗ್ಪುರ್, ಇಂದೋರ್, ಕೋಲ್ಕೊತಾದಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.

ಸೆಪ್ಟಂಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಸರಣಿಯ 2 ನೇ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್, ರಾಂಚಿ, ಗುವಾಹಟಿಯಲ್ಲಿ ಟಿ 20 ಪಂದ್ಯಗಳು ನಡೆಯಲಿವೆ.

ನ್ಯೂಜಿಲೆಂಡ್ ವಿರುದ್ಧ ಪುಣೆ, ಮುಂಬೈ, ಕಾನ್ಪುರ್ ನಲ್ಲಿ 3 ಏಕದಿನ ಪಂದ್ಯಗಳು, ದೆಹಲಿ, ಕಟಕ್, ರಾಜ್ ಕೋಟ್ ನಲ್ಲಿ 3 ಟಿ 20 ಪಂದ್ಯಗಳು ನಡೆಯಲಿವೆ.

ಶ್ರೀಲಂಕಾ ವಿರುದ್ಧ ಕೋಲ್ಕೊತಾ, ನಾಗ್ಪುರ್, ದೆಹಲಿಯಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ. ಅದೇ ರೀತಿ, ಧರ್ಮಶಾಲಾ, ಮೊಹಾಲಿ, ವೈಜಾಗ್ ನಲ್ಲಿ ಏಕದಿನ ಪಂದ್ಯಗಳು, ತಿರುವನಂತಪುರಂ, ಇಂದೋರ್, ಮುಂಬೈನಲ್ಲಿ ಟಿ 20 ಪಂದ್ಯಗಳು ನಡೆಯಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...