alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗರಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ

ಕಳೆದ ಮಾರ್ಚ್ 7 ರಂದು ಪರಿಷ್ಕರಿಸಲಾಗಿದ್ದ ಕೇಂದ್ರ ಗುತ್ತಿಗೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರ ವೇತನ ಮಂಜೂರಿಗೆ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಇದರಿಂದಾಗಿ ಎ ಪ್ಲಸ್ ಆಟಗಾರರು 7 ಕೋಟಿ ರೂ., ಎ, ಬಿ ಮತ್ತು ಸಿ ಗುಂಪಿನ ಆಟಗಾರರಿಗೆ ಕ್ರಮವಾಗಿ 5,  3, ಮತ್ತು 1 ಕೋಟಿ ರೂ. ವೇತನ ಸಿಗಲಿದೆ.

ಮಹಿಳಾ ಆಟಗಾರ್ತಿಯರ ವೇತನ ಹೆಚ್ಚಳಕ್ಕೂ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಲಾದ ಎಲ್ಲ ಪ್ರಸ್ತಾವಗಳಿಗೆ ಅವಿರೋಧವಾಗಿ ಅನುಮೋದನೆ ಸಿಕ್ಕಿದೆ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...