alex Certify
ಕನ್ನಡ ದುನಿಯಾ       Mobile App
       

Kannada Duniya

‘ವಿಶ್ವ ಕಪ್’ ವಿಜೇತ ಅಂಡರ್ 19 ತಂಡಕ್ಕೆ ಸಿಗುತ್ತಿರುವ ಹಣವೆಷ್ಟು ಗೊತ್ತಾ…?

ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಟೀಂ ಇಂಡಿಯಾ ಅಂಡರ್ 19 ತಂಡದ ಆಟಗಾರರು ವಿಶ್ವಕಪ್ ಗೆದ್ದಿದ್ದಾರೆ. ನ್ಯೂಜಿಲೆಂಡ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಮಣಿಸಿದ ಭಾರತ ತಂಡ ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ವಿಶ್ವ ವಿಜೇತ ಯುವ ತಂಡಕ್ಕೆ ಬಿಸಿಸಿಐ ಬಹುಮಾನ ಘೋಷಿಸಿದೆ. ವಿಶ್ವಕಪ್ ಗೆದ್ದ ಅಂಡರ್ 19 ತಂಡದ ತರಬೇತುದಾರರಾಗಿರುವ ರಾಹುಲ್ ದ್ರಾವಿಡ್ ಗೆ 50 ಲಕ್ಷ ರೂಪಾಯಿ ಹಾಗೂ ತಂಡದ ಎಲ್ಲಾ ಆಟಗಾರರಿಗೆ ತಲಾ 30 ಲಕ್ಷ ನೀಡುವುದಾಗಿ ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ.

ತಂಡದ ಇತರೆ ಸಿಬ್ಬಂದಿಗೆ ತಲಾ 20 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆ. ವಿಶ್ವಕಪ್ ಟೂರ್ನಿಯ ಆರಂಭದಿಂದ್ಲೇ ಭಾರತ ತಂಡ ಫೇವರಿಟ್ ಎನಿಸಿಕೊಂಡಿತ್ತು. ಆರಂಭದ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ 100 ರನ್ ಗಳ ಗೆಲುವು ಸಾಧಿಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...