alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್….ಧೋನಿಯನ್ನು ಕಡೆಗಣಿಸಿದ ಬಿಸಿಸಿಐ

ಬಿಸಿಸಿಐ ಆಡಳಿತ ಸಮಿತಿ ಅಕ್ಟೋಬರ್ 2017 ರಿಂದ ಸೆಪ್ಟೆಂಬರ್ 2018 ರವರೆಗಿನ ಆಟಗಾರರ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ಈ ಬಾರಿ ಪುರುಷರ ತಂಡಕ್ಕೆ ಎ+ ಹಾಗೂ ಮಹಿಳೆಯರ ತಂಡಕ್ಕೆ ಸಿ ಕೆಟಗರಿಯನ್ನು ಪರಿಚಯಿಸಲಾಗಿದೆ.

ಬಿಸಿಸಿಐ ಡೊಮೆಸ್ಟಿಕ್ ಆಟಗಾರರ ಪಂದ್ಯ ಶುಲ್ಕವನ್ನು ಸಹ ಶೇ.200 ರಷ್ಟು ಹೆಚ್ಚಳ ಮಾಡಿದೆ. ಪುರುಷರ ತಂಡಕ್ಕೆ ಎ+, ಎ, ಬಿ ಮತ್ತು ಸಿ ಗ್ರೇಡ್ ಇದ್ದು, ಟಾಪ್ ಕೆಟಗರಿಯಲ್ಲಿರೋರಿಗೆ ವಾರ್ಷಿಕ 7 ಕೋಟಿ ರೂಪಾಯಿ ವೇತನ ಸಿಗಲಿದೆ.

ಎ ವರ್ಗದವರಿಗೆ 5 ಕೋಟಿ, ಬಿ ವರ್ಗದವರಿಗೆ 3 ಕೋಟಿ ಹಾಗೂ ಸಿ ಕೆಟಗರಿಯವರಿಗೆ 1 ಕೋಟಿ ರೂಪಾಯಿ ಸಿಗಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಶಿಖರ್ ಧವನ್ ಟಾಪ್ ಕೆಟಗರಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿಗೆ ಎ+ ಗ್ರೇಡ್ ಸಿಕ್ಕಿಲ್ಲ. ಎ ಕೆಟಗರಿಯಲ್ಲಿ ಧೋನಿ, ಅಶ್ವಿನ್, ರವೀಂದ್ರ ಜಡೇಜ, ಮುರುಳಿ ವಿಜಯ್, ಚೇತೇಶ್ವರ ಪೂಜಾರಾ, ವೃದ್ಧಿಮಾನ್ ಸಹಾ ಹಾಗೂ ಅಜಿಂಕ್ಯಾ ರಹಾನೆ ಸ್ಥಾನ ಪಡೆದಿದ್ದಾರೆ.

ಗ್ರೇಡ್ ಬಿ ನಲ್ಲಿ ಕೆ.ಎಲ್. ರಾಹುಲ್, ಉಮೇಶ್ ಯಾದವ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ಇದ್ದಾರೆ.

ಸಿ ವಿಭಾಗದಲ್ಲಿ ಕೇದಾರ್ ಜಾಧವ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್ ಹಾಗೂ ಜಯಂತ್ ಯಾದವ್ ಸ್ಥಾನ ಪಡೆದಿದ್ದಾರೆ.

ಇನ್ನು ಮಹಿಳಾ ಕ್ರಿಕೆಟ್ ತಂಡದ ಗ್ರೇಟ್ ಎ ಆಟಗಾರರಿಗೆ 50 ಲಕ್ಷ, ಬಿ ಕೆಟಗರಿಯವರಿಗೆ 30 ಲಕ್ಷ ಹಾಗೂ ಸಿ ಕೆಟಗರಿಯ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂಪಾಯಿ ವೇತನ ದೊರೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...