alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ದ್ರಾವಿಡ್ ಜಂಟಲ್ ಮ್ಯಾನ್ ಅನ್ನೋದು ಇದೇ ಕಾರಣಕ್ಕೆ….

ರಾಹುಲ್ ದ್ರಾವಿಡ್ ಒಬ್ಬ ಅತ್ಯದ್ಭುತ ಕ್ರಿಕೆಟಿಗ ಅನ್ನೋದು ಎಲ್ರಿಗೂ ಗೊತ್ತು. ಆದ್ರೆ ಅದಕ್ಕಿಂತ್ಲೂ ಹೆಚ್ಚಾಗಿ ಅವರೊಬ್ಬ ಸಹೃದಯಿ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಮನೋಭಾವವುಳ್ಳ ಸೌಮ್ಯ ಮೂರ್ತಿ. ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಪಳಗಿದ ಅಂಡರ್-19 ತಂಡ ಈ ಬಾರಿ ವಿಶ್ವಕಪ್ ಗೆದ್ದಿದೆ.

ಪ್ರಶಸ್ತಿ ಗೆದ್ದ ಭಾರತದ ಕಿರಿಯರ ತಂಡದ ಆಟಗಾರರು, ಕೋಚ್ ದ್ರಾವಿಡ್ ಹಾಗೂ ಇತರ ಸಿಬ್ಬಂದಿಗೆ ಬಿಸಿಸಿಐ ಬಹುಮಾನ ಘೋಷಿಸಿತ್ತು. ದ್ರಾವಿಡ್ ಗೆ 50 ಲಕ್ಷ ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು. ಆಟಗಾರಿಗೆ ತಲಾ 30 ಲಕ್ಷ ರೂಪಾಯಿ ಹಾಗೂ ಇತರ ಕೋಚಿಂಗ್ ಸ್ಟಾಫ್ ಗೆ 20 ಲಕ್ಷ ರೂಪಾಯಿ ನೀಡಲು ನಿರ್ಧರಿಸಿತ್ತು.

ಆದ್ರೆ ದ್ರಾವಿಡ್ ಇದನ್ನು ವಿರೋಧಿಸಿದ್ದರು. ಬಹುಮಾನ ಮೊತ್ತ ಎಲ್ಲರಿಗೂ ಸಮನಾಗಿರಲಿ, ಹೆಚ್ಚಿನ ಹಣ ಪಡೆಯಲು ನಾನು ಸಿದ್ಧನಿಲ್ಲ ಎಂದಿದ್ದರು. ಬಿಸಿಸಿಐ ರಾಹುಲ್ ಮನವಿಗೆ ಮಣಿದಿದೆ. ದ್ರಾವಿಡ್ ಹಾಗೂ ಇತರ ಕೋಚಿಂಗ್ ಸಿಬ್ಬಂದಿಗೆ ತಲಾ 25 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆ.

ಭಾರತ ತಂಡದ ಗೆಲುವಿನಲ್ಲಿ ಎಲ್ಲರ ಪಾತ್ರವೂ ಇದೆ. ಹಾಗಾಗಿ ಗಳಿಕೆ ವಿಚಾರ ಬಂದಾಗಲೂ ಸಮಾನತೆ ಇರಬೇಕು ಅನ್ನೋದು ದ್ರಾವಿಡ್ ವಾದ. ಹಾಗಾಗಿ ತಮ್ಮ ಬಹುಮಾನ ಮೊತ್ತವನ್ನೇ ಕಡಿಮೆ ಮಾಡಿ, ಎಲ್ಲರಿಗೂ ಸಮಾನ ಪ್ರಮಾಣದ ನಗದು ಬಹುಮಾನ ನೀಡುವಂತೆ ಮನವಿ ಮಾಡಿದ್ದರು. ಸಮಾನತೆಗಾಗಿ 25 ಲಕ್ಷ ರೂಪಾಯಿ ಕೈಬಿಟ್ಟ ರಾಹುಲ್ ದ್ರಾವಿಡ್ ನಡೆ ನಿಜಕ್ಕೂ ಗ್ರೇಟ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...