alex Certify
ಕನ್ನಡ ದುನಿಯಾ       Mobile App
       

Kannada Duniya

OMG…! ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ ಇವರು

manoj prabhakarಏಕ ದಿನ ಪಂದ್ಯಗಳೆಂದರೆ ಅಲ್ಲಿ ಹೊಡಿ ಬಡಿ ಆಟದ್ದೇ ಸದ್ದು. ಇದನ್ನು ಇನ್ನಷ್ಟು ಆಕರ್ಷಿಣೀಯವಾಗಿಸುವಂತೆ ಬಂದಿರುವ ಟಿ20 ಪಂದ್ಯಗಳಲ್ಲಿ ಸಿಕ್ಸರ್ ಗಳ ಸುರಿಮಳೆಯನ್ನೇ ಪ್ರೇಕ್ಷಕರು ಕಾದಿರುತ್ತಾರೆ. ಅದೇಕೋ ಏನೋ ಈ ನಾಲ್ವರು ಆಟಗಾರರು ಏಕ ದಿನ ಪಂದ್ಯಗಳಲ್ಲಿ ಸೆಂಚುರಿ ಗಳಿಸಿರುವರಾದರೂ ಇದರಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲಾಗಿಲ್ಲ. ಅಂತಹ ನಾಲ್ವರು ಆಟಗಾರರ ವಿವರ ಇಲ್ಲಿದೆ ನೋಡಿ.

ಭಾರತದ ಮನೋಜ್ ಪ್ರಭಾಕರ್ ಯಾರಿಗೆ ಗೊತ್ತಿಲ್ಲ ಹೇಳಿ. 12 ವರ್ಷಗಳ ಕಾಲ ಭಾರತದ ಪರ ಆಟವಾಡಿದ್ದ ಈ ಆಲ್ ರೌಂಡರ್ ಆಟಗಾರ 130 ಏಕ ದಿನ ಪಂದ್ಯಗಳನ್ನಾಡಿದ್ದು, 2 ಸೆಂಚುರಿ ಹಾಗೂ 11 ಹಾಫ್ ಸೆಂಚುರಿ ಬಾರಿಸಿದ್ದಾರೆ. ಆದರೆ ಒಂದೇ ಒಂದು ಸಿಕ್ಸರ್ ಗಳಿಸಲು ಇವರಿಗೆ ಸಾಧ್ಯವಾಗಲಿಲ್ಲ.

ಜಿಂಬಾಬ್ವೆಯ ದಿಯೋನ್ ಇಬ್ರಾಹಿಂ ರದ್ದು ಮತ್ತೊಂದು ಕಥೆ. ತಮ್ಮ ತಂಡದ ಪರ 82 ಏಕ ದಿನ ಪಂದ್ಯ ಹಾಗೂ 29 ಟೆಸ್ಟ್ ಪಂದ್ಯಗಳನ್ನಾಡಿರುವ ಇವರು, ಏಕ ದಿನ ಪಂದ್ಯಗಳಲ್ಲಿ 1 ಸೆಂಚುರಿ ಹಾಗೂ 4 ಅರ್ಧ ಶತಕ ಗಳಿಸಿದ್ದು, ಟೆಸ್ಟ್ ಪಂದ್ಯಗಳಲ್ಲಿ 10 ಅರ್ಧ ಸೆಂಚುರಿ ಗಳಿಸಿದ್ದರೂ ಏಕ ದಿನ ಹಾಗೂ ಟೆಸ್ಟ್ ನಲ್ಲಿ ಒಂದೇ ಒಂದು ಸಿಕ್ಸರ್ ಗಳಿಸಲಿಲ್ಲ.

ಶ್ರೀಲಂಕಾದ ಥಿಮಿರಾ ಸಮರವೀರ 81 ಟೆಸ್ಟ್ ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದು 5,462 ರನ್ ಗಳಿಸಿದ್ದಾರೆ. ಆದರೆ ಏಕ ದಿನ ಪಂದ್ಯಗಳಲ್ಲಿ ಯಶಸ್ವಿಯಾಗದ ಅವರು 53 ಏಕ ದಿನ ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದರೂ ಇದರಲ್ಲಿ ಒಂದೇ ಒಂದು ಸಿಕ್ಸರ್ ಸಹ ಇರಲಿಲ್ಲ.

ಇನ್ನು ಇಂಗ್ಲೆಂಡ್ ನ ಜೆಫ್ರಿ ಬಾಯ್ಕಟ್, ಕ್ರಿಕೆಟ್ ಅಭಿಮಾನಿಗಳಿಗೆಲ್ಲರಿಗೂ ಗೊತ್ತು. ಏಕ ದಿನ ಪಂದ್ಯಗಳಲ್ಲಿ 1000 ರನ್ ಗಳಿಸಿರುವ ಅವರು, ಒಂದು ಶತಕ ಹಾಗೂ ಒಂಭತ್ತು ಅರ್ಧ ಶತಕ ಗಳಿಸಿದ್ದರೂ ಇದರಲ್ಲಿ ಒಂದೇ ಒಂದು ಸಿಕ್ಸರ್ ದಾಖಲಾಗಿಲ್ಲವೆಂಬುದು ಗಮನಾರ್ಹ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...