alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ಬಾಲ್ ಪಂದ್ಯ ವೀಕ್ಷಿಸಲು ಕ್ರೇನ್ ಏರಿದ ಭೂಪ…!

ಕ್ರೀಡೆಗಳ ಕುರಿತು ಕೆಲವರು ಭಾರೀ ಕ್ರೇಜ್ ಹೊಂದಿರುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ತಂಡಗಳ ಕುರಿತು ಹುಚ್ಚು ಅಭಿಮಾನ ಹೊಂದಿರುವವರು ಆ ತಂಡದ ಪಂದ್ಯಗಳು ಎಲ್ಲೇ ನಡೆದರೂ ತಪ್ಪದೇ ಹಾಜರಾಗಿ ಪ್ರೋತ್ಸಾಹಿಸುತ್ತಾರೆ.

ಹೀಗೆ ಫುಟ್ಬಾಲ್ ಕುರಿತು ಅತೀವ ಅಭಿಮಾನ ಹೊಂದಿದ್ದವನೊಬ್ಬ ನೆಚ್ಚಿನ ತಂಡದ ಪಂದ್ಯ ವೀಕ್ಷಿಸಲಾಗುತ್ತಿಲ್ಲವೆಂಬ ಕಾರಣಕ್ಕೆ ಮಾಡಿರುವ ಐಡಿಯಾ ಬೆಚ್ಚಿ ಬೀಳಿಸುತ್ತೆ. ಟರ್ಕಿಯಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟರ್ಕಿಯ ಆಲಿ ಡೆಮಿರ್ಕಾಯಾ ಎಂಬಾತ ಡೆಂಜಿಸ್ಲ್ಪಾರ್ ಫುಟ್ಬಾಲ್ ತಂಡದ ಕಟ್ಟಾ ಅಭಿಮಾನಿಯಾಗಿದ್ದ. ಆದರೆ ಯಾವುದೋ ಕಾರಣಕ್ಕೆ ಆಲಿಗೆ, ಡೆನಿಜಿಲ್ ಅಟಟರ್ಕ್ ಕ್ರೀಡಾಂಗಣ ಪ್ರವೇಶಿಸದಂತೆ 12 ತಿಂಗಳ ಕಾಲ ನಿಷೇಧ ಹೇರಲಾಗಿತ್ತು. ಆತನ ದುದೃಷ್ಟಕ್ಕೆ ನೆಚ್ಚಿನ ತಂಡದ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಏರ್ಪಾಟಾಗಿತ್ತು.

ಪಂದ್ಯ ಮಿಸ್ ಮಾಡಿಕೊಳ್ಳಲು ಬಯಸದ ಆಲಿ, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತಾನು ಕ್ರೀಡಾಂಗಣ ಪ್ರವೇಶಿಸುತ್ತಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟವನೇ ಕ್ರೇನ್ ಬಾಡಿಗೆಗೆ ನೀಡುವ ಸಂಸ್ಥೆಯೊಂದರ ಬಳಿ ಹೋಗಿದ್ದಾನೆ. ಬೃಹತ್ ಕ್ರೇನ್ ನ್ನು 354 ಲಿರಾ ತೆತ್ತು ಬಾಡಿಗೆಗೆ ಪಡೆದ ಆಲಿ, ಕ್ರೀಡಾಂಗಣದ ಹೊರಗೆ ಅದನ್ನು ಹಾಕಿಸಿದ್ದು, ಅದರ ಮೇಲೇರಿ ಪಂದ್ಯ ವೀಕ್ಷಿಸಲು ಆರಂಭಿಸಿದ್ದಾನೆ.

ಕ್ರೇನ್ ತುತ್ತ ತುದಿಯಲ್ಲಿ ಕುಳಿತಿದ್ದವನನ್ನು ಕಂಡು ಶಾಕ್ ಆದ ಪ್ರೇಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಧಾವಿಸಿ ಬಂದ ಅವರು ಆಲಿಯನ್ನು ಕೆಳಗಿಳಿಸಿ ಮನೆಗೆ ಕಳುಹಿಸಿದ್ದಾರೆ. ಆಲಿಗೆ ಪೂರ್ಣ ಪಂದ್ಯ ವೀಕ್ಷಿಸಲಾಗದಿದ್ದರೂ ಆತನ ನೆಚ್ಚಿನ ತಂಡ 5-0 ಅಂತರದಿಂದ ಜಯ ಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...