alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಲೀನ್ ಬೋಲ್ಡ್ ಗೂ ರಿವ್ಯೂ ಕೇಳಿದ ಬಾಂಗ್ಲಾ ಕ್ರಿಕೆಟಿಗ

bold

ಬ್ಯಾಟ್ಸ್ ಮನ್ ಒಬ್ಬ ಬೋಲ್ಡ್ ಆದಾಗ, ಅದ್ರಲ್ಲೂ ಕ್ಲೀನ್ ಬೋಲ್ಡ್ ಅಂದ್ಮೇಲೆ ಅದರಲ್ಲಿ ರಿವ್ಯೂ ಪ್ರಶ್ನೆಯೇ ಇರುವುದಿಲ್ಲ. ಆದ್ರೆ ಬಾಂಗ್ಲಾದೇಶದ ಓಪನರ್ ಸೌಮ್ಯ ಸರ್ಕಾರ್, ಕ್ಲೀನ್ ಬೋಲ್ಡ್ ಗೂ ರಿವ್ಯೂ ಕೇಳುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ 5ನೇ ದಿನ ಗುಣರತ್ನೆ ಬೌಲಿಂಗ್ ನಲ್ಲಿ ಸೌಮ್ಯ ಸರ್ಕಾರ್ ಕ್ಲೀನ್ ಬೋಲ್ಡ್ ಆಗಿದ್ರು. ಅಂಪೈರ್ ಔಟ್ ಅಂತಾ ಕೈ ಎತ್ತಿದ್ರು. ಆದ್ರೆ ಸೌಮ್ಯ ಸರ್ಕಾರ್ ತಲೆಯಲ್ಲಿ ಅದೇನು ಓಡ್ತಾ ಇತ್ತೋ ಗೊತ್ತಿಲ್ಲ, ಅಂಪೈರ್ ನಿರ್ಧಾರದ ಬಗ್ಗೆ ಅನುಮಾನ ಯಾಕೆ ಬಂತೋ ಗೊತ್ತಿಲ್ಲ.

ಕ್ಲೀನ್ ಬೋಲ್ಡ್ ಆದ್ರೂ ಸೌಮ್ಯ ಸರ್ಕಾರ್ ರಿವ್ಯೂ ಕೇಳಿದ್ರು. ಆದ್ರೆ ಅಲ್ಲಿ ಕೂಡ ಅವರಿಗೆ ಆದದ್ದು ನಿರಾಸೆಯೇ, ಯಾಕಂದ್ರೆ ಅಂಪೈರ್ ನಿರ್ಧಾರ ಸರಿಯಾಗಿಯೇ ಇತ್ತು. ಸೌಮ್ಯ ಸರ್ಕಾರ್ ಪೆವಿಲಿಯನ್ ಗೆ ಮರಳಬೇಕಾಯ್ತು. ಕ್ಲೀನ್ ಬೋಲ್ಡ್ ಗೂ ರಿವ್ಯೂ ಕೇಳಿದ ಈ ಆಟಗಾರನ ಬಗ್ಗೆ ಟ್ವಿಟ್ಟರ್ ನಲ್ಲಿ ತರಹೇವಾರಿ ಕಮೆಂಟ್ ಗಳು ಹರಿದಾಡ್ತಾ ಇವೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...