alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಮಾಡಿದ್ರು ಮತ್ತದೇ ಕೆಲಸ

taskin dhoni

ಏಷ್ಯಾ ಕಪ್ ಟಿ20 ಯಲ್ಲಿ ಪಾಕಿಸ್ತಾನದ ವಿರುದ್ದ ಬಾಂಗ್ಲಾದೇಶ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದ ಕಟ್ಟಾ ಅಭಿಮಾನಿ ಮಹಮ್ಮದ್ ಬಶೀರ್ ರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು, ಈಗ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಅವಮಾನಿಸಿದ್ದಾರೆ.

ನಾಳೆ ಭಾರತ ಹಾಗೂ ಬಾಂಗ್ಲಾ ದೇಶ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಈ ಮಧ್ಯೆ ಬಾಂಗ್ಲಾ ಅಭಿಮಾನಿಯೊಬ್ಬ ವೇಗದ ಬೌಲರ್ ತಸ್ಕೀನ್ ಅಹ್ಮದ್, ಟೀಮ್ ಇಂಡಿಯಾ ನಾಯಕ ಧೋನಿಯವರ ರುಂಡವನ್ನು ಕೈಯ್ಯಲ್ಲಿಡಿದಿರುವಂತೆ ಫೋಟೋಶಾಪ್ ಮಾಡಿರುವ ಚಿತ್ರವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ.

ಈ ಹಿಂದೆಯೂ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಇಂತಹ ಕಿಡಿಗೇಡಿ ಕೃತ್ಯ ಮಾಡಿರುವ ಉದಾಹರಣೆಗಳಿದ್ದು, ಭಾರತ ತಂಡದ ಆಟಗಾರರ ಅರ್ಧ ತಲೆ ಬೋಳಿಸಿರುವಂತೆ ಫೋಟೋಶಾಪ್ ಮಾಡಿ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳ ಈ ಕಿಡಿಗೇಡಿ ಕೃತ್ಯಕ್ಕೆ ಭಾರತ ತಂಡದ ಅಭಿಮಾನಿಗಳು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

bangladesh fans ads

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...