alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ವಿರುದ್ದ ವಿಕೃತ ಆನಂದ ಪ್ರದರ್ಶಿಸಿ ಆಕ್ರೋಶಕ್ಕೆ ತುತ್ತಾದ ಕ್ರಿಕೆಟಿಗ

Cricket - India v Bangladesh - World Twenty20 cricket tournament - Bengaluru, India, 23/03/2016. Bangladesh's Mushfiqur Rahim reacts after his dismissal. REUTERS/Danish Siddiqui

ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಸೋಲಿಸುತ್ತಿದ್ದಂತೆಯೇ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಭಾರತ ಸೋತಿದ್ದಕ್ಕೆ ತಮಗೆ ಅತೀವ ಆನಂದವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ನಿನ್ನೆ ಭಾರತ, ವೆಸ್ಟ್ ಇಂಡೀಸ್ ವಿರುದ್ದ ಸೋಲನ್ನಪ್ಪುತ್ತಿದ್ದಂತೆ ಮುಶ್ಫಿಕರ್ ರಹೀಮ್, ನಿಜವಾದ ಸಂತೋಷವೆಂದರೆ ಇದು….ಸೆಮಿಫೈನಲ್ ನಲ್ಲಿ ಭಾರತ ಸೋತಿತು ಎಂದು ಟ್ವೀಟ್ ಮಾಡಿದ್ದು, ಜೊತೆಗೆ ಸೆಲ್ಫಿ ತೆಗೆದು ಅದನ್ನು ಪೋಸ್ಟ್ ಮಾಡಿದ್ದರು. ರಹೀಮ್ ಅವರ ಈ ವರ್ತನೆಗೆ ಸ್ವತಃ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಈ ಟ್ವೀಟ್ ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ರಹೀಮ್ ಬಳಿಕ ಅದನ್ನು ಡಿಲೀಟ್ ಮಾಡಿದ್ದು, ಮಾತ್ರವಲ್ಲ, ಈ ಕುರಿತು ಕ್ಷಮೆ ಯಾಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...