alex Certify
ಕನ್ನಡ ದುನಿಯಾ       Mobile App
       

Kannada Duniya

“ವಂಚಿಸಿ 2015ರ ವಿಶ್ವಕಪ್ ಗೆದ್ದಿದೆ ಆಸ್ಟ್ರೇಲಿಯಾ’’

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಆರಂಭದಿಂದಲೂ ವಂಚಿಸುತ್ತ ಬಂದಿದೆ. 2015ರಲ್ಲೂ ಆಸ್ಟ್ರೇಲಿಯಾ ತಂಡ ಮೋಸ ಮಾಡಿದೆ. ಹೀಗಂತ ನಾವು ಹೇಳ್ತಿಲ್ಲ. ನ್ಯೂಜಿಲ್ಯಾಂಡ್ ತಂಡದ ಆಟಗಾರ ಗ್ರಾಂಟ್ ಎಲಿಯಟ್ ಆರೋಪ ಮಾಡಿದ್ದಾರೆ.

ಐಸಿಸಿ ವಿಶ್ವಕಪ್ ಫೈನಲ್ ನಲ್ಲಿಯೂ ಆಸ್ಟ್ರೇಲಿಯಾ ತಂಡ ಮೋಸದಾಟವಾಡಿದೆ. ಕಾಂಗರೂ ಪಡೆ ಚೆಂಡು ವಿರೂಪಗೊಳಿಸಿರುವ ಸಾಧ್ಯತೆ ಇದೆ ಎಂದು ಗ್ರಾಂಟ್ ಎಲಿಯಟ್ ಹೇಳಿದ್ದಾರೆ. ಇತ್ತೀಚಿಗೆ ನಡೆದ ಚೆಂಡು ವಿರೂಪ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಗ್ರಾಂಟ್ ಈ ಆರೋಪ ಮಾಡಿದ್ದಾರೆ. 2015ರ ವಿಶ್ವಕಪ್ ನಲ್ಲಿಯೂ ಆಸ್ಟ್ರೇಲಿಯಾ ಚೆಂಡು ವಿರೂಪ ಸೇರಿದಂತೆ ಕಳ್ಳಾಟ ಆಡಿರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂರನೇ ದಿನ ಚೆಂಡು ವಿರೂಪಗೊಳಿಸಿರುವ ಪ್ರಕರಣ ಬಯಲಿಗೆ ಬಂದಿತ್ತು. ಇದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ವಿಡಿಯೋ ಕೈಗೆ ಸಿಕ್ಕ ನಂತ್ರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಡೇವಿಡ್ ವಾರ್ನರ್ ಹಾಗೂ ಸ್ಟಿವ್ ಸ್ಮಿತ್ ಗೆ ಒಂದು ವರ್ಷ ನಿಷೇಧ ವಿಧಿಸಿದೆ. ಇಬ್ಬರು ಆಟಗಾರರೂ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದ ನಂತ್ರ ವಿಶ್ವದಾದ್ಯಂತ ಕ್ರಿಕೆಟ್ ದಿಗ್ಗಜರು ಪ್ರತಿಕ್ರಿಯೆ ನೀಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...