alex Certify
ಕನ್ನಡ ದುನಿಯಾ       Mobile App
       

Kannada Duniya

ಚೆಂಡು ವಿರೂಪಗೊಳಿಸಿದ ಆಟಗಾರರಿಗಿಲ್ಲ ರಿಲೀಫ್

ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​​ ಪಂದ್ಯದ ವೇಳೆ ಚೆಂಡು ವಿರೂಪ ಮಾಡಿದ ಆರೋಪದಡಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್​ ಸ್ಮಿತ್​ ಹಾಗೂ ಉಪ ನಾಯಕ ಡೇವಿಡ್​ ವಾರ್ನರ್​​ ಹಾಗೂ ಬೆನ್​ ಕ್ರ್ಯಾಫ್ಟ್​ರ ಮೇಲೆ ಕ್ರಿಕೆಟ್​ ಆಸ್ಟ್ರೇಲಿಯಾ ನಿಷೇಧ ಹೇರಿತ್ತು.

ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ, ನಿಷೇಧ ಹೇರಿರುವ ಆಟಗಾರರಿಗೆ ದೇಶಿಯ ಟೂರ್ನಿಯಲ್ಲಿ ಆಡಲು ಅವಕಾಶ ಕೊಡಬೇಕೆಂಬ ಚರ್ಚೆ ಈಗ ನಡೆದಿದೆ. ಇದ್ರಿಂದ ಮುಂಬರುವ ವಿಶ್ವಕಪ್​, ಆ್ಯಷಸ್​​ ಸರಣಿಯಲ್ಲಿ ಆಟಗಾರರು ಆಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ. ಆದ್ರೆ, ಕ್ರಿಕೆಟ್​ ಆಸ್ಟ್ರೇಲಿಯಾ (ಸಿಎ) ಮಾತ್ರ ಇದಕ್ಕೆ ಅವಕಾಶ ನೀಡಿಲ್ಲ.

ಇನ್ನು ಕ್ರಿಕೆಟ್​ ಆಸ್ಟ್ರೇಲಿಯಾದ ನಿಯಮಗಳಲ್ಲಿ ಈ ರೀತಿಯ ಅವಕಾಶಗಳು ಇಲ್ಲ. ಆಟಗಾರ, ತಪ್ಪು ಮಾಡಿದ್ದು, ಶಿಕ್ಷೆ ಪ್ರಮಾಣ ಪೂರ್ಣಗೊಳಿಸಿದ ಬಳಿಕವೇ ಅಂಗಳಕ್ಕೆ ಪ್ರವೇಶ ನೀಡಲಾಗುವುದು. ಬಾಲ್​ ಟ್ಯಾಪರಿಂಗ್​ಗೆ ಸಂಬಂಧಪಟ್ಟಂತೆ ಮೂವರು ಆಟಗಾರರ ಮೇಲೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯುವ ಪ್ರಶ್ನೆ ಇಲ್ಲ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...