alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗರ ಕಳ್ಳಾಟದ ಹಿಂದಿನ ಕಾರಣ ಬಿಚ್ಚಿಟ್ಟ ವಾರ್ನರ್ ಪತ್ನಿ

ಚೆಂಡು ವಿರೂಪಗೊಳಿಸಿ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಇದರ ಬೆನ್ನಲ್ಲೇ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಮೌನ ಮುರಿದಿದ್ದಾರೆ.

ತಮ್ಮ ಪತಿ ಕಳ್ಳಾಟವಾಡಲು ಕಾರಣ ಏನು ಅನ್ನೋದನ್ನು ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಜೊತೆಗೆ ನಡೆದ ಘರ್ಷಣೆ ಬಳಿಕ ಆಫ್ರಿಕಾ ಅಭಿಮಾನಿಗಳು ಆಸೀಸ್ ಆಟಗಾರರಿಗೆ ಒಂದೇ ಸಮನೆ ಟಾಂಟ್ ಕೊಡಲು ಆರಂಭಿಸಿದ್ದರಂತೆ.

ಡೇವಿಡ್ ವಾರ್ನರ್ ಕಳ್ಳಾಟವಾಡಲು ಮುಂದಾಗಿದ್ದಕ್ಕೆ ಇದೇ ಕಾರಣ ಅಂತಾ ಪತ್ನಿ ಕ್ಯಾಂಡಿಸ್ ಹೇಳಿದ್ದಾರೆ. ವಾರ್ನರ್ ತುಂಬಾ ಭಾವುಕ ವ್ಯಕ್ತಿ, ಈ ಘಟನೆಯನ್ನು ಅವರಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತಾ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...