alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಡ್ಮಿಂಟನ್ ಆಟಗಾರನಿಗೆ ಸಿಕ್ತು ಜಿಲ್ಲಾಧಿಕಾರಿ ಹುದ್ದೆ

ಬ್ಯಾಡ್ಮಿಂಟನ್ ಆಟಗಾರ ಕೀಡಂಬಿ ಶ್ರೀಕಾಂತ್ ಆಂಧ್ರಪ್ರದೇಶದ ಗುಂಟೂರು ಡೆಪ್ಯುಟಿ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

2017 ರ ಜೂನ್ ನಲ್ಲಿ ಶ್ರೀಕಾಂತ್ ಇಂಡೋನೇಷ್ಯಾ ಚಾಂಪಿಯನ್ ಶಿಪ್ ವಿಜೇತರಾದ ಸಂದರ್ಭದಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಬ್ಯಾಡ್ಮಿಂಟನ್ ಕೋರ್ಟ್ ನಿಂದ ಡೆಪ್ಯುಟಿ ಕಲೆಕ್ಟರ್ ಚೇರ್ ಮೇಲೇ ಶ್ರೀಕಾಂತ್ ಕುಳಿತುಕೊಂಡಿದ್ದಾರೆ.

ಉನ್ನತ ಹುದ್ದೆಗೇರಿದ್ದರೂ ಅವರು ದಿನಾಲು ಕಚೇರಿಗೆ ಬರುವುದು ಡೌಟ್. ಹೈದರಾಬಾದ್ ನ ಪುಲ್ಲೆಲ ಗೋಪಿಚಂದ್ ಅಕಾಡೆಮಿಯಲ್ಲಿ ಅವರು ತರಬೇತಿಯನ್ನು ಮುಂದುವರೆಸಲಿದ್ದಾರೆ.

ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ತವರು ನೆಲದಲ್ಲಿ ಉನ್ನತ ಹುದ್ದೆಯ ಅಧಿಕಾರಿಯಾಗಿರುವುದು ಖುಷಿ ತಂದಿದೆ. ನನ್ನ ಆಟದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇನೆ. ಇದರೊಂದಿಗೆ ಡೆಪ್ಯುಟಿ ಕಲೆಕ್ಟರ್ ಹುದ್ದೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಹುದ್ದೆಗೆ, ಜನರಿಗೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...