alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಡ್ರೆ ಸ್ಟಾಡ್ನಿಕ್ ರನ್ನು ಕುಸ್ತಿಗೆ ಕರೆದ ರಾಮ್ ದೇವ್

baba-r

ನವದೆಹಲಿ: ರಾಷ್ಟ್ರೀಯ ಕುಸ್ತಿಪಟುಗಳೊಂದಿಗೆ ಕುಸ್ತಿ ಆಡಿದ್ದೇನೆ. ಆದರೆ, ವಿದೇಶಿ ಆಟಗಾರರೊಂದಿಗೆ ಕುಸ್ತಿ ಮಾಡಬೇಕೆಂಬ ಬಯಕೆ ಇದೆ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

2008 ರಲ್ಲಿ ನಡೆದ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಸೋಲಿಸಿದ್ದ ಉಕ್ರೇನ್ ನ ಆಂಡ್ರೆ ಸ್ಟಾಡ್ನಿಕ್ ಅವರಿಗೆ ಬಹಿರಂಗ ಆಹ್ವಾನ ನೀಡಿರುವ ರಾಮ್ ದೇವ್, ಯೋಗದ ಶಕ್ತಿಯ ಬಗ್ಗೆ ತಿಳಿಯಲು ನನ್ನೊಂದಿಗೆ ಕುಸ್ತಿ ಆಡಲು ಬನ್ನಿ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಪ್ರೊ ಕುಸ್ತಿ ಲೀಗ್ ನಲ್ಲಿ ಪಂಜಾಬ್ ಮತ್ತು ಮುಂಬೈ ನಡುವೆ ನಡೆದ ಪಂದ್ಯದ ಆರಂಭದಲ್ಲಿ ಮಾತನಾಡಿದ ಅವರು, ವಿದೇಶಿ  ಕುಸ್ತಿ ಪಟುಗಳೊಂದಿಗೆ ಸೆಣಸಲು ಸಜ್ಜಾಗಿದ್ದೇನೆ ಎಂದು ತಿಳಿಸಿದ್ದಾರೆ.

ಹರಿದ್ವಾರದಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ ಸುಶೀಲ್ ಕುಮಾರ್ ಅವರೊಂದಿಗೆ ಕುಸ್ತಿ ಆಡಿದ್ದ ರಾಮ್ ದೇವ್, ಈಗ ಆಂಡ್ರೆ ಸ್ಟಾಡ್ನಿಕ್ ಅವರನ್ನು ಆಹ್ವಾನಿಸಿದ್ದಾರೆ.

ಇದನ್ನು ಒಪ್ಪಿರುವ ಆಂಡ್ರೆ ಕುಸ್ತಿಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...