alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡಬಾರದ್ದನ್ನು ಮಾಡಲೋಗಿ ಸಿಕ್ಕಿ ಹಾಕಿಕೊಂಡ ಆಟಗಾರ್ತಿ

422218-piepa-cleary-getty

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿಯೊಬ್ಬಳು ಈಗ ಸುದ್ದಿಯಾಗಿದ್ದಾಳೆ. ತಾನು ಮಾಡಿದ ತಪ್ಪಿಗೆ ಈಗ ಆಕೆ ಶಿಕ್ಷೆಯನ್ನನುಭವಿಸುತ್ತಿದ್ದು, ಆರು ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಕ್ಕೊಳಗಾಗಿದ್ದಾಳೆ.

ಕ್ರಿಕೆಟ್ ನಲ್ಲಿ ಈಗ ಬೆಟ್ಟಿಂಗ್ ದಂಧೆ ಬಲು ಜೋರಾಗಿದ್ದು, ಇದರ ನಿಯಂತ್ರಣಕ್ಕೆ ಕ್ರಿಕೆಟ್ ಮಂಡಳಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ 19 ವರ್ಷದ ಪಿಯೇಪಾ ಕ್ಲಾರಿ, ಪುರುಷರ ಕ್ರಿಕೆಟ್ ವೇಳೆ ಬೆಟ್ಟಿಂಗ್ ಕಟ್ಟಿ ಸಿಕ್ಕಿ ಬಿದ್ದವಳು.

ಕಳೆದ ನವೆಂಬರ್ ನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ತಂಡದ ನಡುವೆ ನಡೆದ ಟೆಸ್ಟ್ ಪಂದ್ಯದ ವೇಳೆ ಕ್ಲಾರಿ 11 ಡಾಲರ್ ಬೆಟ್ಟಿಂಗ್ ಕಟ್ಟಿದ್ದಳಂತೆ. ಇದು ಕ್ರಿಕೆಟ್ ಮಂಡಳಿಯ ಗಮನಕ್ಕೆ ಬಂದಿದ್ದು, ತನಿಖೆ ನಡೆಸಿದ ಬಳಿಕ ಆಕೆಗೆ ಆರು ತಿಂಗಳ ನಿಷೇಧ ವಿಧಿಸಲಾಗಿದೆ. ಬೆಟ್ಟಿಂಗ್ ನಲ್ಲಿ ಪಾಲ್ಗೊಂಡು ಶಿಕ್ಷೆಯನ್ನನುಭವಿಸಿದ ಎರಡನೇ ಆಸ್ಟ್ರೇಲಿಯನ್ ಮಹಿಳಾ ಕ್ರಿಕೆಟರ್ ಆಗಿದ್ದಾಳೆ ಕ್ಲಾರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...