alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾ ಕೀಪರ್ ಹಿಡಿದ ಕ್ಯಾಚ್ ನೋಡಿದ್ರೆ ನೀವು ನಿಬ್ಬೆರಗಾಗುವುದು ಗ್ಯಾರಂಟಿ

ಅಗಾಧ ಪ್ರತಿಭೆಯ ಹೊರತಾಗಿಯೂ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿರುವ ವಿಕೆಟ್ ಕೀಪರ್ ಪೀಟರ್ ನೆವಿಲ್ ಇದೀಗ ಹಿಡಿದಿರುವ ಕ್ಯಾಚ್ ನೋಡಿ ಕ್ರಿಕೆಟ್ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟಿದೆ.

ಇದು ನಡೆದಿರುವುದು ಕ್ವೀನ್ಸ್ ಲ್ಯಾಂಡ್ ಹಾಗೂ ನ್ಯೂ ಸೌತ್ ವೇಲ್ಸ್ ನಡುವೆ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯಾವಳಿಯಲ್ಲಿ. ಸ್ಪಿನ್ನರ್ ನಥನ್ ಲಿಯಾನ್ ಎಸೆದ ಚೆಂಡು ಕ್ವೀನ್ಸ್ ಲ್ಯಾಂಡ್ ಬ್ಯಾಟ್ಸ್ ಮನ್ ಚಾರ್ಲಿ ಹಾಂಪ್ರೆ ಬ್ಯಾಟನ್ನು ಸವರಿ ಕೀಪರ್ ನೆವಿಲ್ ಕೈಗೆ ಬಡಿದು ಭೂಮಿಯತ್ತ ಮುಖ ಮಾಡಿತ್ತು.

ಅದ್ಯಾವ ಕ್ಷಣದಲ್ಲಿ ನೆವಿಲ್ ಜಾಗೃತರಾದರು, ಚೆಂಡನ್ನು ನೆಲಕ್ಕೆ ಬೀಳುವ ಮೊದಲೇ ಹಿಡಿದರು ಎಂಬುದು ತಿಳಿಯುವುದಕ್ಕೂ ಮೊದಲೇ ಚೆಂಡು ಅವರ ಕೈಯ್ಯಲ್ಲಿ ಸುರಕ್ಷಿತವಾಗಿತ್ತು. ಬ್ಯಾಟ್ಸ್ ಮನ್ ಚಾರ್ಲಿ ಪೆಚ್ಚು ಮೋರೆ ಹಾಕಿ ಪೆವಿಲಿಯನ್ ಕಡೆ ಮುಖ ಮಾಡುವುದೊಂದೇ ಉಳಿದಿದ್ದ ಕಾರ್ಯ. ಈ ಅತ್ಯದ್ಬುತ ಕ್ಯಾಚೇ ಕ್ರಿಕೆಟ್ ದುನಿಯಾದ ಲೇಟೆಸ್ಟ್ ಸುದ್ದಿ.

ನ್ಯೂಸೌತ್ ವೇಲ್ಸ್ ತಂಡದ ನಾಯಕನೂ ಆಗಿರುವ 33ರ ಹರೆಯದ ನೆವಿಲ್ ಪುನರಾಯ್ಕೆ ಬಯಸಿ ಹಿಂದೆ ಅನೇಕ ಬಾರಿ ರಾಷ್ಟ್ರೀಯ ತಂಡದ ಕದ ತಟ್ಟಿದ್ದರಾದರೂ ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದರು. 17 ಟೆಸ್ಟ್ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು ಇದೀಗ ಹಿಡಿದಿರುವ ಬ್ರಿಲಿಯಂಟ್ ಕ್ಯಾಚ್ ಕಾಂಗರೋ ಪಾಳೆಯದಲ್ಲಿ ಸ್ಥಾನ ದೊರಕಿಸಿಕೊಡಬಲ್ಲುದೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...