alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ ಕ್ರಿಕೆಟರ್

ker-kpr

ಆಡಿಲೇಡ್: ಆಟವಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ.

ಆಸ್ಟ್ರೇಲಿಯಾದಲ್ಲಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಟವಾಡುವಾಗ, ಬ್ಯಾಟ್ ಬಡಿದು ವಿಕೆಟ್ ಕೀಪರ್ ಒಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ವಿಕ್ಟೊರಿಯಾ ರಾಜ್ಯ ತಂಡದ ವಿಕೆಟ್ ಕೀಪರ್ ಸ್ಯಾಮ್ ಹಾರ್ಪರ್(24) ಗಾಯಗೊಂಡವರು. ಶೀಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ವೆಸ್ಟ್ ಎಂಡ್ ರೆಡ್ ಬಾಕ್ಸ್ ತಂಡದ ಬ್ಯಾಟ್ಸ್ ಮೆನ್ ಜಾಕ್ ಲೆಹ್ ಮಾನ್ ಬ್ಯಾಟ್ ಬೀಸುವಾಗ, ಕೈಯಿಂದ ಜಾರಿದ ಬ್ಯಾಟ್, ಕೀಪಿಂಗ್ ಮಾಡುತ್ತಿದ್ದ ಸ್ಯಾಮ್ ಹಾರ್ಪರ್ ತಲೆಗೆ ಬಡಿದಿದೆ.

ಹೆಲ್ಮೆಟ್ ಧರಿಸಿದ್ದರೂ ಅವರ ತಲೆಗೆ ಪೆಟ್ಟಾಗಿದೆ. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸೇರಿಸಲಾಗಿದೆ.

ಚಿಕಿತ್ಸೆ ಮುಂದುವರೆಸಲಾಗಿದ್ದು, ಸ್ಯಾಮ್ ಹಾರ್ಪರ್ ಚೇತರಿಸಿಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...