alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಯನ್ನು ಪ್ರೀತಿಸ್ತಾರೆ ಆಸ್ಟ್ರೇಲಿಯಾ ಜನ: ಕ್ಲಾರ್ಕ್

clarke_z5jhnfo

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ಆಸ್ಟ್ರೇಲಿಯಾದ ಎರಡು ಮೂರು ಪತ್ರಕರ್ತರಿಂದ ಕಿರಿಕಿರಿ ಅನುಭವಿಸುವ ಅಗತ್ಯವಿಲ್ಲ. ಅವರು ಕೊಹ್ಲಿ ಇಮೇಜ್ ಹಾಳು ಮಾಡಲು ಪ್ರಯತ್ನಪಡ್ತಿದ್ದಾರೆಂದು ಕ್ಲಾರ್ಕ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ‘ಡೈಲಿ ಟೆಲಿಗ್ರಾಫ್’ ಕೊಹ್ಲಿಯನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೋಲಿಕೆ ಮಾಡಿತ್ತು. ಟ್ರಂಪ್ ಅಂತೆ ಕೊಹ್ಲಿ ಕೂಡ ತಪ್ಪು ಮುಚ್ಚಿಟ್ಟುಕೊಳ್ಳಲು ಮಾಧ್ಯಮಗಳ ಮೇಲೆ ಆರೋಪ ಮಾಡುತ್ತಿದ್ದಾರೆಂದು ಟೀಕಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಲಾರ್ಕ್, ಕೊಹ್ಲಿಯನ್ನು ಟ್ರಂಪ್ ಗೆ ಹೋಲಿಕೆ ಮಾಡುವುದು ಮೂರ್ಖತನ. ವಿರಾಟ್ ಏನು ಮಾಡಿದ್ದಾರೋ ಇದನ್ನು ಸ್ಮಿತ್ ಕೂಡ ಮಾಡಿರಬಹುದು. ನೆನಪಿರಲಿ, ನಾನು ಕೊಹ್ಲಿಯನ್ನು ಇಷ್ಟಪಡ್ತೇನೆ. ಹಾಗೆ ಆಸ್ಟ್ರೇಲಿಯಾ ಜನತೆ ಕೂಡ ಕೊಹ್ಲಿಯನ್ನು ಪ್ರೀತಿಸ್ತಾರೆ. ಕೊಹ್ಲಿ ಆಟ ನನಗೆ ತುಂಬಾ ಇಷ್ಟ. ಕೇವಲ ಎರಡು ಮೂರು ಪತ್ರಕರ್ತರ ಅಭಿಪ್ರಾಯಕ್ಕೆ ಕೊಹ್ಲಿ ತಲೆಕೆಡಿಸಿಕೊಳ್ಳಬಾರದು ಎಂದು ಕ್ಲಾರ್ಕ್ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...