alex Certify
ಕನ್ನಡ ದುನಿಯಾ       Mobile App
       

Kannada Duniya

ಸಹ ಆಟಗಾರನ ಪೃಷ್ಠಕ್ಕೆ ಕೈ ಹಾಕಿದ ಕಿಡಿಗೇಡಿ ಕ್ರಿಕೆಟಿಗ

asis

ಒಂದು ತಂಡದಲ್ಲಿ ಆಟವಾಡುತ್ತಿದ್ದಾರೆಂದರೆ ಆಟಗಾರರ ನಡುವೆ ಸ್ನೇಹ ಬಾಂಧವ್ಯ ಉತ್ತಮವಾಗಿರುತ್ತದೆ. ಹೀಗೆ ಉತ್ತಮವಾದ ಬಾಂಧವ್ಯ ಹೊಂದಿದ ಕಾರಣಕ್ಕೆ ಏನಾದರೂ ಮಾಡಬಹುದೆ? ಹೀಗೆ ಕ್ರಿಕೆಟ್ ಆಟಗಾರನೊಬ್ಬ ಸಹ ಆಟಗಾರನ ಪೃಷ್ಠಕ್ಕೇ ಕೈ ಹಾಕಿದ ಘಟನೆ ನಡೆದಿದೆ.

ಸದಾ, ತಮಾಷೆ ಕೀಟಲೆ ಮಾಡುವ ಮನೋಭಾವ ಹೊಂದಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ, ಖ್ಯಾತ ಬ್ಯಾಟ್ಸ್ ಮನ್ ಉಸ್ಮಾನ್ ಖ್ವಾಜಾ ಹೀಗೆ ತಮಾಷೆ ಮಾಡಲು ಹೋಗಿ ನಗೆಪಾಟಲಿಗೆ ಈಡಾಗಿದ್ದಾರೆ. ಅವರು ತಂಡದ ಸಹ ಆಟಗಾರನೊಬ್ಬನ ಪೃಷ್ಠಕ್ಕೆ ಕೈಹಾಕಿದ್ದು, ಅವರ ಕೈಚಳಕ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಉಸ್ಮಾನ್ ಖ್ವಾಜಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಆಯೋಜನೆಗೊಂಡಿದ್ದ ಏಕದಿನ ಕ್ರಿಕೆಟ್ ಪಂದ್ಯದ ಆರಂಭದಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಹೀಗೆ ಮಾಡಿದ್ದಾರೆ.

ತಂಡದ ಆಟಗಾರರೆಲ್ಲಾ ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಉಸ್ಮಾನ್ ಖ್ವಾಜಾ ಇದೇ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಆ್ಯಡಂ ಜಂಪಾ ಅವರ ಹಿಂಬದಿಗೆ ಕೈಹಾಕಿದ್ದಾರೆ. ಇದು ಕ್ಯಾಮೆರಾದಲ್ಲಿ ಸೆರೆಯಾಗಿ, ಸುದ್ದಿಯಾಗುತ್ತಿದ್ದಂತೆ ಏಕಾಗ್ರತೆ ಪರೀಕ್ಷಿಸಲು ಹಾಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...