alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ ಅಂಪೈರ್ಸ್, ಕಾರಣವೇನು ಗೊತ್ತಾ?

ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಅಂಪೈರ್ ಗಳು ಸುದ್ದಿಯಾಗಿದ್ದಾರೆ. ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ವಾದ್ಯದ ಅಬ್ಬರ ಜೋರಾಗಿತ್ತು. ಇದು ಅಂಪೈರ್ ಗಳಾದ ಕುಮಾರ ಧರ್ಮಸೇನಾ ಹಾಗೂ ಸುಂದರಂ ರವಿಗೆ ಕಿರಿಕಿರಿ ಉಂಟುಮಾಡಿದೆ.

ಲಂಚ್ ಬ್ರೇಕ್ ನಲ್ಲಿ ವಾದ್ಯದವರೊಂದಿಗೆ ಮಾತನಾಡಿದ ಅಂಪೈರ್ ಗಳು, ಅದನ್ನು ಬಾರಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಮತ್ತೆ ಪಂದ್ಯ ಶುರುವಾಗ್ತಿದ್ದಂತೆ ಪ್ರೇಕ್ಷಕರು ವಾದ್ಯ ಬೇಕು ಅಂತಾ ಹಠ ಹಿಡಿದ್ರು. ಹಾಗಾಗಿ ಮತ್ತೆ ಬಂದ ಬ್ಯಾಂಡ್, ಮ್ಯೂಸಿಕ್ ಬಾರಿಸಲು ಶುರುಮಾಡ್ತು.

ಪರಿಸ್ಥಿತಿಯನ್ನು ನಿಭಾಯಿಸಲು ಮ್ಯಾಚ್ ರೆಫ್ರಿ ಜೆಫ್ ಕ್ರೋವೆ ಕೂಡ ಸ್ಥಳಕ್ಕೆ ಬಂದ್ರು. ಎರಡು ಬಾರಿ ಪಂದ್ಯವನ್ನು ಸ್ಥಗಿತಗೊಳಿಸಿ ಬ್ಯಾಂಡ್ ಬಂದ್ ಮಾಡುವಂತೆ ಸೂಚಿಸಲಾಯ್ತು. ಆದ್ರೂ ವಾದ್ಯ ಮಾತ್ರ ತಣ್ಣಗಾಗಲಿಲ್ಲ. ಅಂಪೈರ್ ಗಳು ವಾದ್ಯ ಬಂದ್ ಮಾಡದೇ ಇದ್ರೆ ಪಂದ್ಯವನ್ನೇ ಸ್ಥಗಿತಮಾಡುವುದಾಗಿ ಹೇಳಿದ್ದು, ಕ್ರಿಕೆಟ್ ಪ್ರಿಯರನ್ನು ಕೆರಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...