alex Certify
ಕನ್ನಡ ದುನಿಯಾ       Mobile App
       

Kannada Duniya

ಸೋತು ಸುಣ್ಣವಾದ ಆಸೀಸ್ ತಂಡದಲ್ಲಿ ಭಾರೀ ಬದಲಾವಣೆ

asis

ಆಡಿಲೇಡ್: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 0-2 ಅಂತರದಿಂದ ಟೆಸ್ಟ್ ಸರಣಿ ಸೋತು ತೀವ್ರ ಟೀಕೆಗೆ ಗುರಿಯಾಗಿರುವ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಬದಲಾವಣೆ ಮಾಡಲಾಗಿದೆ.

ನವೆಂಬರ್ 24 ರಿಂದ ಆಸ್ಟ್ರೇಲಿಯಾ ಹಾಗೂ ಆಡಿಲೇಡ್ ನಡುವೆ 3 ನೇ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದ್ದು, ಮ್ಯಾಟ್ ರೆನ್ ಶಾ, ಪೀಟರ್ ಹ್ಯಾಂಡ್ಸ್ ಕೊಂಬ್, ನಿಕ್ ಮ್ಯಾಡಿನ್ ಸನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿಕೆಟ್ ಕೀಪರ್ ಆಗಿ 12 ಪಂದ್ಯಗಳ ಅನುಭವ ಹೊಂದಿರುವ ಮ್ಯಾಥ್ಯೂ ವೇಡ್ ಆಯ್ಕೆಯಾಗಿದ್ದಾರೆ. ಬೌಲರ್ ಗಳಾದ ಜಾಕ್ಸನ್ ಬರ್ಡ್, ಶಾಡ್ ಸೇಯರ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಜೋ ಬರ್ನ್ಸ್, ಆಡಮ್ ವೋಜಸ್, ಕಲ್ಲಮ್ ಫರ್ಗುಸನ್, ಜೋ ಮೆನ್ನೀ ಹಾಗೂ ವಿಕೆಟ್ ಕೀಪರ್ ಪೀಟರ್ ನೆವಿಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

32 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ಹೀಗೆ ಹಲವು ಬದಲಾವಣೆಗಳೊಂದಿಗೆ ಆಸೀಸ್ ತಂಡ ಸೌತ್ ಆಫ್ರಿಕಾ ಎದುರಿಸಲು ಸಜ್ಜಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...