alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಪಾಕ್ ಗೆಲುವಿನ ರಹಸ್ಯ: ಮ್ಯಾಚ್ ಫಿಕ್ಸಿಂಗ್..?

ramdas-athawale

ನಾಗಪುರ: ಲಂಡನ್ ನಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ, ಭಾರತ ತಂಡ ಹೀನಾಯವಾಗಿ ಸೋತಾಗಲೇ, ಕ್ರಿಕೆಟ್ ಅಭಿಮಾನಿಗಳಲ್ಲಿ ಅಂತಹುದೊಂದು ಶಂಕೆ ವ್ಯಕ್ತವಾಗಿತ್ತು.

ಐ.ಸಿ.ಸಿ. ಟೂರ್ನಿಗಳಲ್ಲಿ ಎಂದೂ ಪಾಕ್ ವಿರುದ್ಧ ಸೋಲದ ಭಾರತ, ಫೈನಲ್ ಪಂದ್ಯದಲ್ಲಿ 180 ರನ್ ಗಳ ಅಂತರದಿಂದ ಸೋತಿತ್ತು. ಇದು ಟೀಂ ಇಂಡಿಯಾ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತ್ತಲ್ಲದೇ, ಅನುಮಾನ ವ್ಯಕ್ತವಾಗಿತ್ತು.

ಈಗ ಇಂತಹುದೊಂದು ಅನುಮಾನವನ್ನು ಕೇಂದ್ರ ಸಚಿವರೇ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ಸಚಿವ ರಾಮದಾಸ್ ಅಠಾವಳೆ ಅವರು, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಸೋತಿರುವುದು ಹೇಗೆ ಎನ್ನುವುದೇ ಪ್ರಶ್ನಾರ್ಹವಾಗಿದೆ. ಟೀಂ ಇಂಡಿಯಾ ಆಟಗಾರರನ್ನು ತನಿಖೆಗೆ ಒಳಪಡಿಸಬೇಕಿದೆ ಎಂದು ಹೇಳಿದ್ದಾರೆ.

ಅದೇ ಟೂರ್ನಿಯ ನಾಕೌಟ್ ಹಂತದಲ್ಲಿ ಪಾಕ್ ತಂಡವನ್ನು ಬಗ್ಗು ಬಡಿದಿದ್ದ ಭಾರತ ಬಲಿಷ್ಠ ತಂಡವಾಗಿದೆ. ಬಲಿಷ್ಠ ತಂಡವಾಗಿದ್ದರೂ, ಫೈನಲ್ ನಲ್ಲಿ ಹೀನಾಯವಾಗಿ ಸೋತಿದೆ ಎಂದಿದ್ದಾರೆ.

ಪಾಕ್ ಗೆಲುವಿನಲ್ಲಿ ಬೇರೆ ಏನೋ ಇರುವ ಸಾಧ್ಯತೆ ಕಂಡುಬರುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ಅವರು, ಟೀಂ ಇಂಡಿಯಾ ಆಟಗಾರರನ್ನು ತನಿಖೆಗೆ ಒಳಪಡಿಸಬೇಕಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...