alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಪಂದ್ಯದಲ್ಲಿ 1045 ರನ್ ಬಾರಿಸಿದ ಮುಂಬೈ ಬಾಲಕ

ಶಾಲಾ ಮಟ್ಟದ ಕ್ರಿಕೆಟ್ ಟೂರ್ನಿಯೊಂದರಲ್ಲಿ ಮುಂಬೈ ಬಾಲಕ ತನಿಷ್ಕ್ ಗವಾಟೆ 1045 ರನ್ ಬಾರಿಸಿದ್ದಾನೆ. ಅಂಡರ್-14 ನವಿ ಮುಂಬೈ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ತನಿಷ್ಕ್ ಈ ಸಾಧನೆ ಮಾಡಿದ್ದಾನೆ. ಕೆಲ ವರ್ಷಗಳ ಹಿಂದಷ್ಟೆ ಭಂಡಾರಿ ಕಪ್ ಇಂಟರ್ ಸ್ಕೂಲ್ ಟೂರ್ನಿಯಲ್ಲಿ ಪ್ರಣವ್ ಧನವಾಡೆ ಎಂಬ ಬಾಲಕ 1009 ರನ್ ಬಾರಿಸಿದ್ದ.

ನವಿ ಮುಂಬೈನಲ್ಲಿ ನಡೆದ ಟೂರ್ನಿಯಲ್ಲಿ ತನಿಷ್ಕ್ ಚವಾಣ್ ಇಲವೆನ್ ತಂಡದ ಪರ ಆಡಿದ್ದ. ಯಶ್ವಂತ್ ರಾವ್ ಚೌಹಾಣ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಯಾಗಿರೋ ತನಿಷ್ಕ್, 515 ಬಾಲ್ ಗಳಲ್ಲಿ 1045 ರನ್ ಸಿಡಿಸಿರೋದು ವಿಶೇಷ. ಇದರಲ್ಲಿ 149 ಬೌಂಡರಿ ಹಾಗೂ 67 ಸಿಕ್ಸರ್ ಗಳಿವೆ.

ಇತ್ತೀಚೆಗಷ್ಟೆ ತನಿಷ್ಕ್ ಗೆ ಓಪನರ್ ಆಗಿ ಬಡ್ತಿ ಸಿಕ್ಕಿತ್ತು. ಹಾಗಾಗಿ ಈ ಸಾಧನೆ ಮಾಡಲು ಇನ್ನಷ್ಟು ಅನುಕೂಲವಾಗಿದೆ. ಇಷ್ಟು ದೀರ್ಘ ಸಮಯದವರೆಗೆ ಔಟಾಗದೇ ಬ್ಯಾಟಿಂಗ್ ಮಾಡಿರೋದು ತನಿಷ್ಕ್ ಗೆ ಕೂಡ ಖುಷಿ ಕೊಟ್ಟಿದೆ. ಈ ಸಾಧನೆ ಭವಿಷ್ಯದಲ್ಲಿ ನೆರವಾಗಬಹುದು ಅನ್ನೋ ನಿರೀಕ್ಷೆ ಅವನಿಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...