alex Certify
ಕನ್ನಡ ದುನಿಯಾ       Mobile App
       

Kannada Duniya

ಇಮ್ರಾನ್ ಖಾನ್ ವಿಚ್ಚೇದನ ನೀಡಿದ್ದ ಕಾರಣ ಬಿಚ್ಚಿಟ್ಟ ಮಾಜಿ ಪತ್ನಿ

imran-khan-reham-khanಪಾಕಿಸ್ತಾನದ ಮಾಜಿ ಕ್ರಿಕೆಟಿಗ, ತೆಹ್ರಿಕ್ ಇ ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ರಿಂದ ವಿಚ್ಚೇದನ ಪಡೆದ ವರ್ಷದ ಬಳಿಕ ಮಾಜಿ ಪತ್ನಿ ರೆಹಾಮ್ ಖಾನ್, ಇಮ್ರಾನ್ ಖಾನ್ ತಮಗೆ ವಿಚ್ಚೇದನ ನೀಡಿದ್ದಕ್ಕೆ ಕಾರಣವಾದ ಅಸಲಿ ವಿಚಾರವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.

ಟಿವಿ ಪತ್ರಕರ್ತೆಯೂ ಆಗಿರುವ ರೆಹಾಮ್ ಖಾನ್, ಇಮ್ರಾನ್ ಖಾನ್ ಅವರನ್ನು ವಿವಾಹವಾದ ಕೇವಲ 10 ತಿಂಗಳಲ್ಲೇ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದರು. ರಾಜಕೀಯ ಮಹಾತ್ವಾಕಾಂಕ್ಷಿ ಹೊಂದಿದ್ದ ರೆಹಾಮ್ ಖಾನ್, ತೆಹ್ರಿಕ್ ಇ ಇನ್ಸಾಫ್ ಪಕ್ಷದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುತ್ತಿದ್ದುದೇ ವಿಚ್ಚೇದನಕ್ಕೆ ಕಾರಣವಾಯಿತೆಂದು ಭಾವಿಸಲಾಗಿತ್ತು.

ಆದರೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೆಹಾಮ್ ಖಾನ್, ತಮ್ಮಿಬ್ಬರ ವಿವಾಹ ವಾರ್ಷಿಕೋತ್ಸವ ಸಮೀಪಿಸುತ್ತಿದ್ದ ಕಾರಣ ನನಗೇನು ಗಿಫ್ಟ್ ಕೊಡುತ್ತೀರೆಂದು ಇಮ್ರಾನ್ ಖಾನ್ ಅವರ ಬಳಿ ತಮಾಷೆಯಾಗಿ ಕೇಳಿದ್ದೆ. ಇಷ್ಟಕ್ಕೆ ಕೋಪಿಸಿಕೊಂಡ ಅವರು, ವಿಚ್ಚೇದನ ನೀಡಿದರೆಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಜನತೆಗೂ ಇಮ್ರಾನ್ ಖಾನ್ ಇದೇ ರೀತಿ ನಡು ನೀರಿನಲ್ಲಿ ಕೈಬಿಡಬಾರದೆಂದು ತಾವು ಆಶಿಸುವುದಾಗಿ ರೆಹಾಮ್ ಖಾನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...