alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾಡ್ ಸಮಾರೋಪದಲ್ಲಿ ತ್ರಿವರ್ಣಧ್ವಜ ಹಿಡಿವ ಮಹಿಳಾ ಕ್ರೀಡಾಪಟು ಯಾರು ಗೊತ್ತಾ?

ಜಕಾರ್ತ: ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿಯುವ ಗೌರವ ಬೆಳ್ಳಿ ಪದಕ ಗೆದ್ದ ರಾಷ್ಚ್ರೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಮ್ಪಾಲ್ ಪಾಲಿಗೆ ದೊರಕಿದೆ.

ಕಳೆದ 20 ವರ್ಷಗಳಲ್ಲಿ ಮೊದಲ ಬಾರಿ ಏಷ್ಯಾಡ್ ನ ಫೈನಲ್ ಪ್ರವೇಶಿಸಿದ್ದ ಭಾರತದ ನಾರಿಯರು ಫೈನಲ್ ನಲ್ಲಿ ಜಪಾನ್ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲುಂಡರೂ ತಂಡದ ಪ್ರದರ್ಶನ ಪ್ರಶಂಸೆಗೆ ಪಾತ್ರವಾಗಿದೆ.

ಈ ಯಶಸ್ಸಿನಲ್ಲಿ ರಾಣಿ ರಾಮ್ಪಾಲ್ ಪಾತ್ರ ಮಹತ್ವದ್ದಾಗಿತ್ತು. ಹೀಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆಯು(ಐಒಎ) ಈ ಅವಕಾಶವನ್ನು ಭಾರತದ ಮಹಿಳಾ ಹಾಕಿಪಟುವಿಗೆ ನೀಡಿದೆ. ವಿಶ್ವಕಪ್ ನಲ್ಲಿ ಆಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ್ತಿ ಎಂಬ ದಾಖಲೆಯೂ ರಾಣಿ ಅವರ ಹೆಸರಿನಲ್ಲಿದೆ.

2009ರಲ್ಲೇ ರಾಷ್ಟ್ರೀಯ ತಂಡದ ಕದ ತಟ್ಟಿದ್ದ ರಾಣಿ 2010ರಲ್ಲಿ ವಿಶ್ವಕಪ್ ನಲ್ಲಿ ಭಾಗವಹಿಸುವಾಗ ಕೇವಲ 15 ವರ್ಷವಷ್ಟೇ.
ಏಷ್ಯಾಡ್ ನ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಭಾರತದ ಧ್ವಜವನ್ನು ಹಿಡಿದಿದ್ದರು. ಅವರು ಬಳಿಕ ನಡೆದ ಸ್ಪರ್ಧೆಯಲ್ಲಿ ಚಿನ್ನ ಗಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...