alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯನ್‌ ಗೇಮ್ಸ್‌ ನಲ್ಲಿ ರಾಷ್ಟ್ರ ಧ್ವಜ ಹಿಡಿಯಲಿದ್ದಾರೆ ನೀರಜ್‌ ಚೋಪ್ರಾ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್‌ ಚೋಪ್ರಾ, ಏಷ್ಯನ್‌ ಗೇಮ್ಸ್‌-2018 ರಲ್ಲಿ ಭಾರತದ ಧ್ವಜ ಹಿಡಿಯಲಿದ್ದಾರೆ.

ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷರು ಈ ಕುರಿತು ಮಾಹಿತಿ ನೀಡಿದ್ದು, ಆ.18 ರಿಂದ ಏಷ್ಯನ್‌ ಗೇಮ್ಸ್‌ ಆರಂಭಗೊಳ್ಳಲಿದೆ. ಪ್ರಾರಂಭೋತ್ಸವದಲ್ಲಿ ನೀರಜ್‌ ಚೋಪ್ರಾ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

ಕಾಮನ್‌ವೆಲ್ತ್‌ ಜಾವೆಲಿನ್ ಥ್ರೋ ನಲ್ಲಿ ನೀರಜ್‌ ಚೋಪ್ರಾ ಚಿನ್ನ ಗೆದ್ದಿದ್ದರು. ಅಲ್ಲದೆ ಕಳೆದ ತಿಂಗಳು ಫ್ರಾನ್ಸ್‌ನಲ್ಲಿ ನಡೆದ ಅಥ್ಲೆಟಿಕ್ಸ್ ಮೀಟ್‌ನಲ್ಲಿ ನೀರಜ್‌ ಚಿನ್ನ ಗಳಿಸಿದ್ದರು. ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್‌ ಮೀಟಿಂಗ್‌ನಲ್ಲಿ 87.43ಮೀಟರ್ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ್ದರು.

ಇದಲ್ಲದೆ ಅಂಡರ್‌ 20 ವಿಭಾಗದಲ್ಲಿ ಚೋಪ್ರಾ 86.48 ಮೀಟರ್‌ ಜಾವೆಲಿನ್‌ ಎಸೆಯುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್ ಶಿಪ್‌-2017ರಲ್ಲಿಯೂ ನೀರಜ್‌ ಚಿನ್ನದ ಪದಕ ಗಳಿಸಿದ್ದರು.

ಭಾರತೀಯ ಹಾಕಿ ತಂಡದ ಸರ್ದಾರ್ ಸಿಂಗ್‌, 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಧ್ವಜ ಹಿಡಿದಿದ್ದರು. 2014ರಲ್ಲಿ ಭಾರತ ಒಟ್ಟಾರೆ 57 ಪದಕಗಳನ್ನು ಗಳಿಸಿತ್ತು. ಈ ಪೈಕಿ 11ಚಿನ್ನ, 10 ಬೆಳ್ಳಿ ಹಾಗೂ 36 ಕಂಚಿನ ಪದಕ ಭಾರತ ಗಳಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...