alex Certify
ಕನ್ನಡ ದುನಿಯಾ       Mobile App
       

Kannada Duniya

200 ಮೀಟರ್ ಬಟರ್ಫ್ಲೈ ಚಾಂಪಿಯನ್ಶಿಪ್ : ಫೈನಲ್ ಪ್ರವೇಶಿಸಿದ ಸಜನ್ ಪ್ರಕಾಶ್

ಏಷ್ಯನ್ ಗೇಮ್ಸ್ 2018ರಲ್ಲಿ ಭಾರತ ಉತ್ತಮ ಆರಂಭ ಕಂಡಿದೆ. ಭಾನುವಾರ ಮಹಿಳಾ ಕಬಡ್ಡಿ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ. ಇತ್ತ ಬಟರ್ಫ್ಲೈ ಚಾಂಪಿಯನ್ಶಿಪ್ ನಲ್ಲಿ ಭಾರತಕ್ಕೆ ಪದಕ ಬರೋದು ನಿಶ್ಚಿತವಾಗಿದೆ. 200 ಮೀಟರ್ ಬಟರ್ಫ್ಲೈ ಚಾಂಪಿಯನ್ಶಿಪ್ ನಲ್ಲಿ  ಈಜುಗಾರ ಸಜನ್ ಪ್ರಕಾಶ್ ಫೈನಲ್ ಪ್ರವೇಶ ಮಾಡಿದ್ದಾರೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಭಾರತದ ಸಜನ್, ಅಂತಿಮ ಹಂತದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯಲು ಯಶಸ್ವಿಯಾದ್ರು. ಈ ಮೂಲಕ 200 ಮೀಟರ್ ಬಟರ್ಫ್ಲೈ ಚಾಂಪಿಯನ್ಶಿಪ್ ನ ಫೈನಲ್ ಪ್ರವೇಶ ಮಾಡಿದ್ದಾರೆ. ಸಜನ್ ಹಿಟ್-3ನಲ್ಲಿ ಒಂದು ನಿಮಿಷ 58.12 ಸೆಕೆಂಡ್ ಸಮಯ ತೆಗೆದುಕೊಂಡು ಮೊದಲ ಸ್ಥಾನ ಪಡೆದ್ರು. ನಂತ್ರ ನಡೆದ ಅಂತಿಮ ಪಟ್ಟಿಯಲ್ಲಿ ಟಾಪ್ -8ರಲ್ಲಿ ಸ್ಥಾನ ಪಡೆದ್ರು.

ಇದಲ್ಲದೆ 17 ವರ್ಷದ ಭಾರತದ ಶ್ರೀಹರಿ ನಟರಾಜ್ ಪುರುಷರ 100 ಮೀಟರ್  ಬ್ಯಾಕ್ಸ್ಟ್ರೋಕ್ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದಾರೆ. ಹಿಟ್ -1ರಲ್ಲಿ ಮೊದಲ ಸ್ಥಾನ ಪಡೆದ ಶ್ರೀಹರಿ ನಟರಾಜನ್ ಅಂತಿಮ ಪಟ್ಟಿ ಟಾಪ್ 8ನಲ್ಲಿ ಸ್ಥಾನ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...