alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾ ಅನರ್ಹರಾಗಲು ಕಾರಣವಾಯ್ತಾ ಆ ಕಮೆಂಟ್…?

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಮಹಿಳೆಯರ 400 ಮೀಟರ್ ಓಟದಲ್ಲಿ ಬೆಳ್ಳಿ ಸಾಧನೆ ಮಾಡಿರುವ ಹಿಮಾ ದಾಸ್, 200 ಮೀಟರ್ ಸ್ಪರ್ಧೆಯಲ್ಲಿ ಅನರ್ಹಗೊಳ್ಳಲು ಕಾರಣ ಏನು ಎಂಬುದು ಬಹಿರಂಗವಾಗಿದೆ.

ಹಿಮಾ ದಾಸ್ 200 ಮೀಟರ್ ಓಟದಲ್ಲಿ ಅರ್ಹತಾ ಸುತ್ತಿನ ರೇಸ್ ನಲ್ಲಿ ಅನರ್ಹಗೊಂಡಿದ್ದರು. ಇದರ ಹಿಂದಿನ ಕಾರಣವನ್ನು ಹಿಮಾ ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ತಾಣದಲ್ಲಿ ಮಾಡಿದ ಕಮೆಂಟ್ ಹಿಮಾರನ್ನು ಒತ್ತಡಕ್ಕೆ ಸಿಲುಕಿಸಿದೆಯಂತೆ. ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ಹಿಮಾ, ವಿನಾಕಾರಣ ದೂಷಿಸಿ ಮಾಡಿದ್ದ ಕಮೆಂಟ್ ಮನಸ್ಸಿಗೆ ಘಾಸಿ ಮಾಡಿದೆ ಎಂದಿದ್ದಾರೆ.

ಕ್ರೀಡಾಭಿಮಾನಿಗಳೇ ನಿಮ್ಮಲ್ಲಿ ವಿನಂತಿಸಿಕೊಳ್ಳುವುದು ಇಷ್ಟೇ, ದಯವಿಟ್ಟು ಅಥ್ಲೀಟ್ ಗಳ ಮೇಲೆ ಒತ್ತಡ ಹೇರಬೇಡಿ. ಕ್ರೀಡಾಪಟುಗಳ ಪ್ರದರ್ಶನಕ್ಕೆ ಧಕ್ಕೆ ಉಂಟುಮಾಡುವ ಕಮೆಂಟ್ ಮಾಡಬೇಡಿ ಎಂದು ತಿಳಿಸಿದ್ದಾರೆ. ಆದ್ರೆ, ಈ ವೇಳೆ ಹಿಮಾ ಯಾರ ಹೆಸರನ್ನು ಸಹ ಬಹಿರಂಗಪಡಿಸಿಲ್ಲ.

ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ಅವರು 50.79 ಸೆಕೆಂಡ್ ಗಳಲ್ಲಿ ಗುರಿ ತಲುಪಿ ದಾಖಲೆ ಬರೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ 4×400 ಮೀಟರ್ ಮಿಶ್ರ ರಿಲೇಯಲ್ಲೂ ರಜತ ಸಾಧನೆ ಮಾಡಿದ ತಂಡದಲ್ಲಿ ಹಿಮಾ ಇದ್ದರು ಎನ್ನೋದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...