alex Certify
ಕನ್ನಡ ದುನಿಯಾ       Mobile App
       

Kannada Duniya

ಫೈನಲ್ ದಂಗಲ್ ಗೆದ್ದ ವಿನೇಶ್ ಗೆ ‘ಸ್ವರ್ಣ’…!

ಜಕಾರ್ತನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಎರಡನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್ 50 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ವರ್ಣದ ನಗೆ ಬೀರಿದ್ದಾರೆ.

ಭರ್ಜರಿ ಕಾದಾಟದಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಸೊಗಸಾದ ಆಟ ಆಡಿದ್ರು. ಜಪಾನ್‌ನ ಇರಿ ಯೂಕಿಯ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದ ವಿನೇಶ್, ಅಂಕಗಳ ಬೇಟೆಯಲ್ಲಿ ಮುಂದಿದ್ದರು. ತಮ್ಮ ಕಲಾತ್ಮಕ ಆಟದ ಪ್ರದರ್ಶನ ನೀಡಿದ ವಿನೇಶ್ ಮೊದಲ ಗೇಮ್ ನಲ್ಲಿ ಅಂಕದ ಮುನ್ನಡೆ ಕಾಯ್ದುಕೊಂಡಿದ್ದರು.

ಎರಡನೇ ಗೇಮ್ ನಲ್ಲಿ ಎದುರಾಳಿ ಅಂಕ ಗಳಿಸಲು ಹಾಕಿಕೊಂಡ ಪ್ಲಾನ್ ಎಲ್ಲ ಉಲ್ಟಾ ಹೊಡೆಯಿತು. ಒಂದು ಹಂತದಲ್ಲಿ 4-0 ಯಿಂದ ಮುನ್ನಡೆ ಸಾಧಿಸಿದ್ದ ವಿನೇಶ್, ಕೊನೆಯ ಕ್ಷಣದಲ್ಲಿ ಎದುರಾಳಿಗೆ ಅಂಕಗಳನ್ನು ಬಿಟ್ಟು ಕೊಟ್ಟರು.

ಇನ್ನು ಪಂದ್ಯದ ಕೊನೆಯ ಮೂರು ಸೆಕೆಂಡ್ ಗಳ ಆಟ ನಿಜಕ್ಕೂ ಕುಸ್ತಿ ಅಭಿಮಾನಿಗಳನ್ನು ರಂಜಿಸಿತು. ಆ ಮೂರು ಕ್ಷಣದಲ್ಲಿ ವಿನೇಶ್ 2 ಅಂಕಗಳನ್ನು ಕಲೆ ಹಾಕಿದ್ರು. ಪರಿಣಾಮ ವಿನೇಶ್ ಮುಡಿಗೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ಲಭಿಸಿತು. 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಸಿಕ್ಕ ಎರಡನೇ ಚಿನ್ನ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...