alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಚು ಗೆದ್ದು ಏಷ್ಯನ್ ಗೇಮ್ಸ್ ನಲ್ಲಿ ಇತಿಹಾಸ ಬರೆದ ಸೈನಾ ನೆಹ್ವಾಲ್

18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಬಂದಿದೆ. ಮಹಿಳಾ ಬ್ಯಾಡ್ಮಿಂಟನ್ ಸೆಮಿಫೈನಲ್ ಪಂದ್ಯದಲ್ಲಿ ಸೋಲುಂಡ ಸೈನಾ ನೆಹ್ವಾಲ್ ಕಂಚು ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಸೈನಾ ಪಡೆದ ಮೊದಲ ಪದಕ ಇದಾಗಿದೆ.

ಸೈನಾ, ತೈವಾನಿನ ಆಟಗಾರ್ತಿ ತೈ ತ್ಸುಯಿಂಗ್ ವಿರುದ್ಧ 21-17, 21-14 ರ ನೇರ ಸೆಟ್ ನಿಂದ ಸೋಲುಂಡಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಇನ್ನೊಂದು ಚಿನ್ನ ಖಚಿತ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಕಂಚಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಆದ್ರೆ ಸೈನಾ ಈ ಮೂಲಕ ಇತಿಹಾಸ ಬರೆದಿದ್ದಾರೆ.

36 ವರ್ಷಗಳಿಂದ ಏಷ್ಯನ್ ಗೇಮ್ಸ್ ನ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಪದಕ ಬಂದಿರಲಿಲ್ಲ. ಸೈನಾ ಭಾರತಕ್ಕೆ ಪದಕ ನೀಡಿ ಇತಿಹಾಸ ಬರೆದಿದ್ದಾರೆ. 1982ರಲ್ಲಿ ಸಯ್ಯದ್ ಮೋದಿ ಕಂಚಿನ ಪದಕ ಗೆದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...