alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಾಲ್ ಮಾಡಿದ ಸಿಂಧು: ಏಷ್ಯನ್ ಗೇಮ್ಸ್ ನಲ್ಲಿ ಇತಿಹಾಸ ಬರೆದ ಆಟಗಾರ್ತಿ

ಏಷ್ಯನ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಸಿಂಧು ಕಮಾಲ್ ಮಾಡಿದ್ದಾರೆ. ಏಷ್ಯನ್ ಗೇಮ್ಸ್ ಮಹಿಳೆಯರ ಸಿಂಗಲ್ಸ್ ನಲ್ಲಿ ಸಿಂಧು ಫೈನಲ್ ಗೇರಿದ್ದಾರೆ. ಏಷ್ಯನ್ ಗೇಮ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಫೈನಲ್ ತಲುಪಿದ ಮೊದಲ ಭಾರತದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಒಂದು ಗಂಟೆ ಐದು ನಿಮಿಷ ಸೆಣೆಸಿ ವಿಶ್ವದ ನಂಬರ್ -2 ಆಟಗಾರ್ತಿ ಜಪಾನಿನ ಅಕಾನೆ ಯಮಗುಚಿಯವರನ್ನು ಮಣಿಸಿದ್ರು. 21-17, 15-21 ಹಾಗೂ 21-10 ಅಂಕಗಳಿಂದ ಗೆಲುವು ಸಾಧಿಸಿದ ಸಿಂಧು ಫೈನಲ್ ಗೇರಿದ್ದಾರೆ. ಸಿಂಧು ಫೈನಲ್ ನಲ್ಲಿ ಚೀನಾದ ತೈಜು ಯಿಂಗ್ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣೆಸಲಿದ್ದಾರೆ.

ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ನ ಮಹಿಳೆ ಅಥವಾ ಪುರುಷರ ವಿಭಾಗದಲ್ಲಿ ಭಾರತದ ಯಾವುದೇ ಆಟಗಾರರು ಫೈನಲ್ ಪ್ರವೇಶ ಮಾಡಿಲ್ಲ. ಈಗ ಸಿಂಧು ಫೈನಲ್ ಗೇರಿದ್ದು, ಭಾರತೀಯರ ಚಿನ್ನದ ಕನಸು ನನಸು ಮಾಡುವ ಸಾಧ್ಯತೆ ಹೆಚ್ಚಿದೆ. ವಿಶ್ವದ ನಂಬರ್ 1 ಆಟಗಾರ್ತಿ ವಿರುದ್ಧ ಸಿಂಧು ಆಗಸ್ಟ್ 28ರಂದು ಸೆಣೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...