alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ನೆರವು ಬೇಡಿದ ಆಫ್ಘಾನ್ ಅಥ್ಲಿಟ್ ಗಳು

ಯುದ್ಧ ಭೀತಿಯಲ್ಲಿರುವ ಆಫ್ಘಾನ್ ನಲ್ಲಿ ವಾತಾವರಣ ದಿನದಿನಕ್ಕೂ ಹದಗೆಡುತ್ತಿರುವಾಗಲೇ ಅಲ್ಲಿನ ಅಥ್ಲೆಟ್ ಗಳು ತಮ್ಮ ತರಬೇತಿಗೆ ಸಹಕಾರ ನೀಡುವಂತೆ ಭಾರತವನ್ನು ಕೋರಿದ್ದಾರೆ.

ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡು ಸಾಧನೆ ಮೆರೆಯುವ ಕನಸು ಹೊತ್ತಿರುವ ಅಲ್ಲಿನ ಅಥ್ಲೆಟ್ ಗಳು ಭಾರತದ ಉತ್ತರಕ್ಕೆ ಎದುರು ನೋಡುತ್ತಿದ್ದಾರೆ.

ತಮ್ಮ ದೇಶದ ಕ್ರಿಕೆಟ್ ಬೆಳವಣಿಗೆಗೆ ನೆರವಾದ ರೀತಿಯಲ್ಲೇ ಅಥ್ಲೆಟ್ ಗಳಿಗೂ ಸಹಕಾರ ನೀಡಿ ಎಂದು ನೇರವಾಗಿ ಭಾರತಕ್ಕೆ ಅಹವಾಲು ಮಂಡಿಸಿದ್ದಾರೆ.

ಸುದ್ದಿಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಥ್ಲೆಟ್ ಝಹಿರಿ ಎಂಬುವರು, ನಾವು ನಿರಂತರವಾಗಿ ಆತಂಕದಲ್ಲಿ ಜೀವಿಸುತ್ತಿದ್ದೇವೆ. ಶಾಂತಿಯುತ ಜೀವನವನ್ನು ನಾವು ಬಯಸುತ್ತೇವೆ. ನಾವು ನಮ್ಮ ಕನಸುಗಳನ್ನು ಸಾಧಿಸಲು ಬಯಸುತ್ತೇವೆ. ನಮ್ಮ ದೇಶದ ಹೆಮ್ಮೆ ಎತ್ತರಕ್ಕೆ ಏರಿಸಬೇಕೆಂಬ ಬಯಕೆ ಇದೆ ಎಂದು ಹೇಳಿದ್ದಾರೆ.

ತಾಲಿಬಾನ್ ದಾಳಿಗೆ ಸಿಲುಕಿರುವ ದೇಶವೊಂದರ ಕ್ರಿಕೆಟ್ ಗೆ ನೆರವು ಸಿಕ್ಕಿದ್ದರಿಂದ ಅಲ್ಲಿನ ಕ್ರೀಡಾಪಟು ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಇಂಥ ಬದಲಾವಣೆ ನಾವು ಕೂಡ ಎದುರು ನೋಡುತ್ತಿದ್ದೇವೆ ಎಂದವರು ಹೇಳಿಕೊಂಡಿದ್ದಾರೆ. ಇವರ ಮಾತನ್ನು ಬೆಂಬಲಿಸಿ ಅನೇಕ ಕ್ರೀಡಾಪಟುಗಳು ಅಭಿಪ್ರಾಯ ನೀಡಿದ್ದು ಭಾರತದ ಉತ್ತರಕ್ಕೆ ಎದುರು ನೋಡುತ್ತಿದ್ದಾರೆ.

ನಾವು ನಮ್ಮ ಸುರಕ್ಷತೆ ಬಗ್ಗೆ ಚಿಂತೆ ಮಾಡದೆ ತರಬೇತಿ ಪಡೆಯಬೇಕಾದರೆ ಭಾರತದಲ್ಲಿ ಅವಕಾಶ ಪಡೆಯಬೇಕು. ಈ ಸಮಸ್ಯೆಗೆ ಇದೇ ದೊಡ್ಡ ಪರಿಹಾರವಾಗಿದೆ ಎಂದು ಅವರು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...