alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾ ಗೇಮ್ಸ್ ನಲ್ಲಿ ಸ್ಥಾನ ಪಡೆದ 10 ಹೊಸ ಆಟ

ಇಂಡೋನೇಷ್ಯಾದಲ್ಲಿ ಇಂದಿನಿಂದ 18 ನೇ ಏಷ್ಯನ್ ಗೇಮ್ಸ್ ಶುರುವಾಗ್ತಿದೆ. ಈ ಬಾರಿ 10 ಆಟಗಳು ಮೊದಲ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಸ್ಥಾನ ಪಡೆದಿವೆ. ಜಕಾರ್ತಾ ಹಾಗೂ ಪಾಲೆಂಬಂಗ್ ನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ. ಇಂದಿನಿಂದ ಸೆಪ್ಟೆಂಬರ್ ವರೆಗೆ ಗೇಮ್ಸ್ ನಡೆಯಲಿದೆ.

ಭಾರತೀಯ ಸಮಯಾನುಸಾರ ಸಂಜೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮ ಶುರುವಾಗಲಿದೆ. ರಾತ್ರಿ 9 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ 28 ಒಲಂಪಿಕ್ಸ್ ಗೇಮ್ಸ್, ನಾಲ್ಕು ಹೊಸ ಒಲಂಪಿಕ್ಸ್ ಗೇಮ್ಸ್, 8 ಒಲಂಪಿಕ್ಸೇತರ ಪಂದ್ಯಗಳು ನಡೆಯಲಿವೆ. ಈ ಬಾರಿ ಭಾರತ 34 ಆಟಗಳಲ್ಲಿ ಸ್ಪರ್ಧೆ ನಡೆಸಲಿದೆ.

ಕಾಂಟ್ರಾಕ್ಟ್ ಬ್ರಿಡ್ಜ್ : ಇಸ್ಪಿಟ್ ಆಟದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತು. ಈ ಆಟ ಇದೇ ಮೊದಲ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಸ್ಥಾನ ಪಡೆದಿದೆ. ಎರಡು ಆಟಗಾರರ ಜೋಡಿ ಗೆಲುವಿಗಾಗಿ ಸ್ಪರ್ಧೆ ನಡೆಸಲಿದೆ. 14 ದೇಶಗಳ 217 ಆಟಗಾರರು ಇದ್ರಲ್ಲಿ ಪಾಲ್ಗೊಳ್ಳಲಿದ್ದಾರೆ.

3×3 ಬಾಸ್ಕೆಟ್ ಬಾಲ್ : ಈ ಆಟ ನಾಲ್ಕು ಆಟಗಾರರನ್ನು ಒಳಗೊಂಡಿದೆ. ಮೂರು ಆಟಗಾರರು ಮೈದಾನದಲ್ಲಿದ್ರೆ ಒಬ್ಬ ಹೊರಗಿರುತ್ತಾನೆ.

ಇದಲ್ಲದೆ ಜೆಟ್ ಸ್ಕೀ, ಪ್ಯಾರಾಗ್ಲೈಡಿಂಗ್, ಪೆಂಕಾಕ್ ಸಿಲೆಟ್, ಜು-ಜಿಟ್ಸು, ಸಾಂಬೊ, ಕುರಾಶ್, ಕ್ಲೈಂಬಿಂಗ್, ರೋಲರ್ ಕ್ರೀಡೆಗಳು ನಡೆಯಲಿವೆ. ಭಾರತೀಯ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಿದ್ದು, ಹೆಚ್ಚಿನ ಪದಕ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...